ಮಂಗಳೂರು-ರಾಮೇಶ್ವರಂ ವಿಶೇಷ ರೈಲು ಓಡಾಟ

ಮಂಗಳೂರು-ರಾಮೇಶ್ವರಂ ವಿಶೇಷ ರೈಲು ಓಡಾಟ

ಮಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ, ಚೆನ್ನೈ ಎಗ್ಮೋರ್ನಿಂದ ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಸೆಂಟ್ರಲ್ನಿಂದ ರಾಮೇಶ್ವರಂಗೆ ಏಕಮುಖ ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ಅಧಿಸೂಚನೆ ಹೊರಡಿಸಿದೆ.

06036 ಸಂಖ್ಯೆಯ ವಿಶೇಷ ರೈಲು ಇಂದು ರಾತ್ರಿ 11:55 ಗಂಟೆಗೆ ಚೆನ್ನೈ ಎಗ್ಮೋರ್ನಿಂದ ಹೊರಟು, ನಾಳೆ(ಅ.18) ಸಂಜೆ 7:45ಕ್ಕೆ  ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ.

ಈ ರೈಲು ಮಾರ್ಗಮಧ್ಯೆ ಪೆರಂಬೂರು, ತಿರುವಳ್ಳೂರು, ಅರಕ್ಕೋಣಂ ಜಂಕ್ಷನ್, ಕಾಟ್ಪಾಡಿ ಜಂಕ್ಷನ್, ಜೋಲಾರ್ಪೇಟೈ  ಜಂಕ್ಷನ್, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪೂರು, ಪೊದನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಶೋರನೂರು ಜಂಕ್ಷನ್, ತಿರೂರು, ಕೋಝಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನ್ನೂರು, ನೀಲೇಶ್ವರಂ, ಕನ್ಹಂಗಡ್ ಮತ್ತು ಕಾಸರಗೋಡು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

06142 ಸಂಖ್ಯೆಯ ವಿಶೇಷ ರೈಲು ಇದೇ 19ರಂದು ಬೆಳಿಗ್ಗೆ 4:15ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಟು ಅದೇ ದಿನ ಸಂಜೆ 7:30ಕ್ಕೆ ರಾಮೇಶ್ವರಂ ತಲುಪಲಿದೆ ಎಂದು  ಮೈಸೂರು ವಿಭಾಗದ ರೈಲ್ವೇ ಪ್ರಕಟಣೆ ತಿಳಿಸಿದೆ.

ಈ ರೈಲು ಮಾರ್ಗಮಧ್ಯೆ ಕಾಸರಗೋಡು, ಕನ್ಹಂಗಡ್, ಪಯ್ಯನ್ನೂರು, ಕಣ್ಣೂರು, ತಲಶ್ಶೇರಿ, ವಡಕರ, ಕೋಝಿಕ್ಕೋಡ್, ತಿರೂರು, ಶೋರನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಪಾಲಕ್ಕಾಡ್ ಟೌನ್, ಕೊಲ್ಲಂಗೋಡ್, ಪೊಲ್ಲಾಚಿ ಜಂಕ್ಷನ್, ಉದುಮಲೈ ಪೇಟೈ, ಪಳನಿ, ಒಟ್ಟಂಚತ್ರಂ, ದಿಂಡಿಗಲ್ ಜಂಕ್ಷನ್, ಮದುರೈ ಜಂಕ್ಷನ್, ಮನಮದುರೈ ಜಂಕ್ಷನ್, ಪರಮಕುಡಿ ಮತ್ತು ರಾಮನಾಥಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

ಈ ಎರಡೂ ವಿಶೇಷ ರೈಲುಗಳು ಒಟ್ಟು 21 ಬೋಗಿಗಳನ್ನು ಹೊಂದಿರಲಿವೆ. ಇವುಗಳಲ್ಲಿ ಪ್ರಥಮ ದರ್ಜೆ ಎಸಿ, ಎಸಿ ಟು ಟಯರ್, ಎಸಿ ತ್ರಿ ಟಯರ್, ಸ್ಲೀಪರ್ ಕ್ಲಾಸ್, ಸಾಮಾನ್ಯ ದರ್ಜೆ ಬೋಗಿಗಳು, ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು ಒಳಗೊಂಡಿರಲಿವೆ ಎಂದು  ರೈಲ್ವೇ ಮೈಸೂರು ವಿಭಾಗದ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article