ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಶ್ರಾವ್ಯ ಬಿ.ಎಸ್.ಗೆ ಅತ್ಯುತ್ತಮ ಶ್ರೇಯಾಂಕ
Thursday, October 29, 2026
ಮಂಗಳೂರು: ಕರ್ನಾಟಕ ರಾಜ್ಯ ಡಾ. ಗಂಗೂಭಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯವು 2025-26ರಲ್ಲಿ ನಡೆಸಿದ ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಶ್ರಾವ್ಯ ಬಿ.ಎಸ್. ಅವರು ಶೇ.90 ಅತ್ಯುತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಈಕೆ ನಗರದ ಸೌರಭ ಸಂಗೀತ ನೃತ್ಯ ಕಲಾ ಪರಿಷತ್ ಇದರ ಗುರು ವಿಧುಷಿ ಡಾ. ಶ್ರೀವಿಧ್ಯಾ ಇವರ ಶಿಷ್ಯೆ ಆಗಿದ್ದು, ಶ್ರೀ ಶ್ರೀಕೃಷ್ಣ ಮಯ್ಯ ಮತ್ತು ಬಬಿತಾ ಕೃಷ್ಣ ಮಯ್ಯ ಇವರ ಪುತ್ರಿ.