ನೃತ್ಯೋಪಾಸನಾ ಕಲಾ ಅಕಾಡೆಮಿಯ ಏಳು ಮಂದಿ ವಿದ್ಯಾರ್ಥಿನಿಯರಿಗೆ ವಿದುಷಿ ಪದವಿ

ನೃತ್ಯೋಪಾಸನಾ ಕಲಾ ಅಕಾಡೆಮಿಯ ಏಳು ಮಂದಿ ವಿದ್ಯಾರ್ಥಿನಿಯರಿಗೆ ವಿದುಷಿ ಪದವಿ


ಪುತ್ತೂರು: ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ 2026ರ ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ವಿಶೇಷ ಪರೀಕ್ಷೆಗಳ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿಯ ಏಳು ಮಂದಿ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.

ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರ ಮಾರ್ಗದರ್ಶನದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯರು ಶೈಕ್ಷಣಿಕ ಸಾಧನೆಯೊಂದಿಗೆ ನೃತ್ಯಕ್ಷೇತ್ರದಲ್ಲಿನ ತಮ್ಮ ಪ್ರತಿಭೆಯನ್ನೂ ಸಾಬೀತುಪಡಿಸಿದ್ದಾರೆ. ಇವರೆಲ್ಲರು ಕಳೆದ 15 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ.

ಅಕ್ಷಯ ಶಂಕರಿ ಬಿ. ಅವರು 600ರಲ್ಲಿ 465 ಅಂಕ ಗಳಿಸಿ ಶೇ.77.5ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಉಪ್ಪಿನಂಗಡಿ ಸಮೀಪದ ರಾಧಾಕೃಷ್ಣ ಭಟ್ ಬಿ. ಮತ್ತು  ಶಶಿಕಿರಣ ಎಸ್. ಅವರ ಪುತ್ರಿಯಾದ ಅವರು ಪ್ರಸ್ತುತ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.

ಶ್ರಾವ್ಯ ಅವರು ಶೇ.74.5ರಷ್ಟು ಅಂಕ ಗಳಿಸಿದ್ದು, ಪುತ್ತೂರಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಈಕೆ ಉಪ್ಪಿನಂಗಡಿಯ ಸುಬ್ರಾಯ ಮತ್ತು ಶಾಂತ ಅವರ ಪುತ್ರಿ.

ಶ್ರುತಿರಂಜನಿ ಎಸ್. ಅವರು ಶೇ.62.16ರಷ್ಟು ಅಂಕ ಗಳಿಸಿದ್ದು, ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ವರ್ಷದ ಬಿಬಿಎ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ತೂರಿನ ಸಚೀಂದ್ರ ವಾರಂಬಳ್ಳಿತ್ತಾಯ ಮತ್ತು ಶಕುಂತಳ ಅವರ ಪುತ್ರಿ.

ಉಪ್ಪಿನಂಗಡಿಯ ತನುವಿ ಅವರು 600ರಲ್ಲಿ 492 ಅಂಕ ಗಳಿಸಿ ಶೇ.82ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಅವರು ಪ್ರಸ್ತುತ ವಿವೇಕಾನಂದ ಕಲಾ, ವಿಜ್ಞಾನ ಮತ್ತು  ವಾಣಿಜ್ಯ ಮಹಾವಿದ್ಯಾಲಯದಲ್ಲಿ ತೃತೀಯ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ದೂರದರ್ಶನದ ಬಿ-ಗ್ರೇಡ್ ಕಲಾವಿದೆಯಾಗಿರುವ ಅವರು ಕರ್ನಾಟಕ ಸಂಗೀತ  ನೃತ್ಯ ಅಕಾಡೆಮಿಯಿಂದ ಶಿಷ್ಯವೇತನವನ್ನೂ ಪಡೆದಿದ್ದಾರೆ. ಎಂ. ಯೋಗಾನಂದ ಮತ್ತು ಎಂ. ಸುನೀತಾ ಅವರ ಪುತ್ರಿ.

ಪೃಥ್ವಿಶ್ರೀ ಕೆ. ಸುಬ್ರಹ್ಮಣ್ಯ ಅವರು ಶೇ.82.6ರಷ್ಟು ಅಂಕ ಗಳಿಸಿದ್ದಾರೆ. ವಾಣಿಜ್ಯ ಸ್ನಾತಕೋತ್ತರ ಪದವೀಧರೆಯಾಗಿರುವ ಅವರು ದೂರದರ್ಶನದ ಬಿ-ಗ್ರೇಡ್ ಕಲಾ ವಿದೆಯಾಗಿದ್ದಾರೆ. ಕಾಸರಗೋಡು ನಿವಾಸಿ ಬಾಲಸುಬ್ರಹ್ಮಣ್ಯ ಮತ್ತು ಶ್ರೀದೇವಿ ಅವರ ಪುತ್ರಿ.

ಹಂಸನಂದಿನಿ ಅವರು ಶೇ.58.5ರಷ್ಟು ಅಂಕ ಗಳಿಸಿದ್ದು, ಪ್ರಸ್ತುತ ಮಂಗಳೂರಿನ ಕಾಗ್ನಿಜೆಂಟ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಸುಬ್ರಹ್ಮಣ್ಯದ ಎಸ್.ಕೆ. ವೇಣುಗೋಪಾಲ ಮತ್ತು ಭವಾನಿ ಅವರ ಪುತ್ರಿ

ಫಲ್ಗುಣಿ ವಿ. ಅವರು 600ರಲ್ಲಿ 415 ಅಂಕ ಗಳಿಸಿ ಶೇ.69.17ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಅವರು ಪ್ರಸ್ತುತ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಪ್ರಥಮ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಈಕೆ ವಿಟ್ಲದ ಉದಯೇಶ್ ಕೆದಿಲಾಯ ವಿ. ಮತ್ತು ವಿ. ಲತಾ ಯು. ಕೆದಿಲಾಯ ಅವರ ಪುತ್ರಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article