‘ಯಾವುದೇ ಪೊಲೀಸ್ ಠಾಣೆಯಲ್ಲಿ ಲವ್ ಜಿಹಾದ್ ದೂರು ದಾಖಲಾಗಿಲ್ಲ': ಸುಧೀರ್ ಕುಮಾರ್ ಮುರೊಳ್ಳಿ
ವಕೀಲ ಹಾಗೂ ಕೆಪಿಸಿಸಿ ವಕ್ತಾರರಾದ ಸುಧೀರ್ ಕುಮಾರ್ ಮುರೊಳ್ಳಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ ‘ ಎಂಜಿ ಹೆಗಡೆ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಲವ್ ಜಿಹಾದ್ ಪುಸ್ತಕ ಬರೆದಿದ್ದಾರೆ. ಅವರು ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿದಾಗ ‘ ಯಾವುದೇ ಪೊಲೀಸ್ ಠಾಣೆಯಲ್ಲಿ ಲವ್ ಜಿಹಾದ್ ದೂರು ದಾಖಲಾಗಿಲ್ಲ’ ಎಂಬ ಒಂದೇ ಸಾಲಿನ ಉತ್ತರ ಸಿಕ್ಕಿದೆ. ಲವ್ ಜಿಹಾದ್ ಎನ್ನುವ ಶಬ್ದವನ್ನು ಸೃಷ್ಟಿ ಮಾಡಿರುವುದಕ್ಕೆ ಯಾವುದೇ ಆಧಾರ ಇಲ್ಲ ಎನ್ನುವುದನ್ನು ಅವರ ಈ ಕೃತಿ ಸ್ಪಷ್ಟಪಡಿಸಿದೆ ಎಂದರು.
ನಮ್ಮಲ್ಲಿ ಲಿಬರಲ್ ಮೈಂಡ್ ಸೆಟ್ ಇರಬೇಕು. ಎಲ್ಲರಿಗೂ, ಎಲ್ಲ ಸಮುದಾಯಗಳಿಗೂ ಎಲ್ಲ ತಂದೆ ತಾಯಿಗಳಿಗೂ ಬೇಕಾಗಬಹುದಾದ ಪ್ರಗತಿಪರ ಸಮಾಜವನ್ನು ನಾವು ಕಟ್ಟಬೇಕಾಗಿದೆ ಎಂದು ಹೇಳಿದರು.
ಮತಾಂತರ , ಲವ್ ಜಿಹಾದ್ ಶಬ್ದಗಳಿಗೆ ಸಾಂಸ್ಕೃತಿಕ , ವೈಚಾರಿಕಾ ಪ್ರತಿರೋಧಗಳು ಇರಬೇಕು. ಇದಕ್ಕೆ ಈ ಪುಸ್ತಕ ಬಂದಿದೆ ಎಂದು ನುಡಿದರು.
ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ ಎಂಜಿ ಹೆಗಡೆ ಶ್ರಮಪಟ್ಟು ಪುಸ್ತಕ ಬರೆದಿದ್ದಾರೆ. ಇದೊಂದು ವಿಶಿಷ್ಟ ವಾದ ಪುಸ್ತಕ ವಾಗಿದೆ. ಇದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅಡಿಗಲ್ಲು ಆಗಲಿ ಎಂದು ಹಾರೈಸಿದರು.
ವಕೀಲ ಪುಸ್ತಕ ಬಿಡುಗಡೆ ಸಮಿತಿ ಅಧ್ಯಕ್ಷ ಯಶವಂತ ಮರೋಳಿ ಅಧ್ಯಕ್ಷತೆ ವಹಿಸಿದ್ದರು.
ಎಂ.ಜಿ.ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ‘ಎರಡು ದಶಕಗಳಿಂದ ಲವ್ ಜಿಹಾದ್ ಕೇಳುತ್ತಾ ಬಂದವರು. ಇದರ ಬಗ್ಗೆ ಇದೊಂದು ಸತ್ಯಶೋಧನೆಯ ಕೃತಿಯಾಗಿದೆ ಎಂದು ನುಡಿದರು.
ಮಾಜಿ ಪತ್ರಕರ್ತ ಶ್ರೀನಿವಾಸನ್ ನಂದಗೋಪಾಲ್ , ಡಾ. ರಾಜಾರಾಮ್ ಉಪ್ಪಿನಂಗಡಿ , ಪುಸಗ್ತಕ ಬಿಡುಗಡೆ ಸಮಿತಿ ಉಪಾಧ್ಯಕ್ಷ ಮಂಜುಳಾ ನಾಯಕ್, ಗಣೇಶ್ ಪೂಜಾರಿ ,ಚಿತ್ತರಂಜನ್ ಶೆಟ್ಟಿ ಬೊಂಡಾಲ, ಪಿಎ ರಹೀಮ್ ಬಂಟ್ವಾಳ, ಪ್ರದೀಪ್ ಬೇಲಾಡಿ ಉಪಸ್ಥಿತರಿದ್ದರು.
ರವಿಪೂಜಾರಿ ಸೂರಿಂಜೆ ಸ್ವಾಗತಿಸಿದರು. ರಮೇಶ್ ಕೋಟೆ ಕಾರ್ಯಕ್ರಮ ನಿರೂಪಿಸಿದರು.