ವಾಮಂಜೂರು ವರ್ಷಿತ್ ಕುತ್ತಾರ್ ನೆನಪಿನಲ್ಲಿ ಡಿವೖಎಫ್ಐ ಜನಜಾಗೃತಿ

ವಾಮಂಜೂರು ವರ್ಷಿತ್ ಕುತ್ತಾರ್ ನೆನಪಿನಲ್ಲಿ ಡಿವೖಎಫ್ಐ ಜನಜಾಗೃತಿ


ಮಂಗಳೂರು: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಡಿವೖಎಫ್ಐನ ಕಾರ್ಯಕರ್ತ ವರ್ಷಿತ್ ಕುತ್ತಾರ್ ತನ್ನ ಸಾವಿನಲ್ಲೂ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದು ಇವರ ನೆನಪಿನಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಡಿ ವೈ ಎಫ್ ಐ ಮಂಜೂರು ಪ್ರದೇಶ ಸಮಿತಿಯು ಅಂಗಾಂಗ ದಾನ ಮತ್ತು ಸಂಚಾರಿ ನಿಯಮಗಳ ಕುರಿತಾದ ಜನಜಾಗೃತಿ ಸಭೆಯನ್ನು ವಾಮಂಜೂರಿನ ಜೈ ಶಂಕರ್ ಮಿತ್ರ ಮಂಡಳಿಯಲ್ಲಿ ಹಮ್ಮಿಕೊಂಡಿತು. 


ಈಶ ಸಭೆಯನ್ನು ಉದ್ದೇಶಿಸಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಉಪನಿರಕ್ಷಕರಾದ ಸುಧಾಕರ್ ಮಾತನಾಡುತ್ತಾ ಸಂಚಾರಿ ನಿಯಮ ಎಂಬುದು ಪೊಲೀಸರಿಗಾಗಿ ಜನರು ಪಾಲಿಸಬೇಕಾದ ನಿಯಮಗಳಲ್ಲ. ಸಂಚಾರಿ ನಿಯಮಗಳು ಜನರ ಸುರಕ್ಷತೆಗೆ ಇರುವ ನಿಯಮಗಳಾಗಿದ್ದು ಚಾಲಕರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಇಂದಿನ ದಿನಮಾನಗಳಲ್ಲಿ ವಾಹನದ ಅಪಘಾತಗಳು ಹೆಚ್ಚಾಗುತ್ತಿದ್ದು ಬಹುತೇಕ ಸಾವುಗಳು ಸಂಚಾರಿ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಆಗುತ್ತಿದೆ. ಚಾಲಕನ ಜೀವವು ಅವರ ಕುಟುಂಬಕ್ಕೆ ಜೀವನಧಾರವಾಗಿದ್ದು ಜೊತೆಗೆ ಸಹಚಾಲಕರು, ಪಾದಚಾರಿಗಳ ಜೀವವು ಕೂಡ ಅಷ್ಟೇ ಮೌಲ್ಯಯುತವಾದದ್ದು ಆಗಿರುತ್ತದೆ. ಹಾಗಾಗಿ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು ಮುಂದುವರಿದು ಮಾತನಾಡುತ್ತಾ ಇಂದು ಮೊಬೈಲ್ ಎನ್ನುವಂತದ್ದು ಎಲ್ಲರ ಕೈಯಲ್ಲೂ ಇರುವ ಆಧುನಿಕ ಸಾಧನವಾಗಿದೆ ಹಾಗಾಗಿ ಇಂತಹ ಮೊಬೈಲ್ ಮೂಲಕವಾಗಿ ವಂಚಿಸುವ, ಹಣವನ್ನು ಕಸಿದುಕೊಳ್ಳುವ ಸೈಬರ್ ಕ್ರೈಂ ಅಪರಾಧಗಳು ಹೆಚ್ಚಾಗುತ್ತಿದ್ದು ಮೊಬೈಲ್ ಗಳಿಗೆ ಬರುವ ಅನವಶ್ಯಕ ಲಿಂಕ್ ಗಳಿಂದ ನಾವು ದೂರ ಇರಬೇಕು. ವಿಶೇಷವಾಗಿ ಯುವಕರು ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಮೊದಲಾದವುಗಳ ನಿಯಮಿತ ಬಳಕೆ ಮಾಡುವುದು ಸೂಕ್ತ ಎಂದರು.


ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಡಿ ವೖ ಎಫ್ ಐ ನ ರಾಜ್ಯ ಕಾರ್ಯದರ್ಶಿಯಾದ ಸಂತೋಷ್ ಬಜಾಲ್ ಇವರ ಮಾತನಾಡುತ್ತಾ ಮಾನವ ದೇಹದ ಅಂಗಾಂಗಗಳು ಕೃತಕವಾಗಿ ತಯಾರಿಸಲಾಗದ ಅತ್ಯಮೂಲ್ಯ ಅಂಗಗಳಾಗಿವೆ. ಇಂದು ಭಾರತದಲ್ಲಿ ಸುಮಾರು ಎಂಬತ್ತು ಸಾವಿರದಷ್ಟು ರೋಗಿಗಳಿಗೆ ಅಂಗದ ಅವಶ್ಯಕತೆ ಇದ್ದು ಇಂತಹ ದಾನದ ಸಂದರ್ಭ ನಮ್ಮೊಳಗೆ ಮತ್ತು ನಮ್ಮ ಕುಟುಂಬದೊಳಗೆ ಸೃಷ್ಟಿಯಾದಾಗ ಇನ್ನೊಬ್ಬನ ಪುನರ್ಜನ್ಮಕ್ಕಾಗಿ ಅಂಗಾಂಗ ದಾನಕ್ಕೆ ನಾವು ಮುಂದಾಗಬೇಕು. ಜೊತೆಗೆ ಅಂದರ ಬಾಳಿಗೆ ಬೆಳಕಾಗಲು ಕಣ್ಣಿನ ದಾನಕ್ಕೂ ಹೆಚ್ಚಿನ ಜನರು ಮನಸ್ಸು ಮಾಡಬೇಕು. ಯುವಕರು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡುವ ಮೂಲಕವಾಗಿ ರೋಗಿಗಳ ಬದುಕಿಗೆ ನೆರವಾಗಬೇಕು. ವ್ಯಕ್ತಿಯ ಭಾವನಾತ್ಮಕತೆ ಮತ್ತು ಧಾರ್ಮಿಕ ಕ್ರಿಯಾ ವಿಧಿಗಳಿಗಿಂತಲೂ ಅಂಗಾಂಗ ದಾನ ಹೆಚ್ಚಿನ ಮಹತ್ವವನ್ನು ಪಡೆದಿದೆ. ಮತ್ತೊಬ್ಬನ ಜೀವ ಉಳಿಸುವುದು ಬಹುದೊಡ್ಡ ಮಹತ್ವದ ಕೆಲಸ ಎಂದರು.

ಡಿ ವೈ ಎಫ್ ಐ ನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಮನೋಜ್ ವಾಮಂಜೂರ್ ಮಾತನಾಡುತ್ತಾ ಜನರಿಗೆ ನಿತ್ಯ ಜಾಗೃತಿಯನ್ನು ಮೂಡಿಸುವುದು ಡಿವೈಎಪ್ಐ ನ ಕರ್ತವ್ಯವಾಗಿರುತ್ತದೆ. ಪ್ರತಿ ಬಿ ವೈ ಎಫ್ ಐ ಸದಸ್ಯರು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಮತ್ತು ಇತರರಿಗೂ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸಲು ಕಾನೂನು ಸುವ್ಯವಸ್ಥೆಯ ಜೊತೆ ಕೈಜೋಡಿಸಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯಾಗಿರುವ ಕಮಲಾಕ್ಷ, ಡಿವೈ ಎಫ್ ಐ ನ ವಾಮಜೂರು ಪ್ರದೇಶ ಅಧ್ಯಕ್ಷರಾದ ಚಂದ್ರಹಾಸ್ ತಾರಿಗುಡ್ಡೆ, ಕಾರ್ಯದರ್ಶಿ ಮಹೇಶ್ ಬೊಂಡಂತಿಲ, ಖಜಾಂಚಿ ಕೀರ್ತನ್  ವಾಮಂಜೂರು, ಜಿಲ್ಲಾ ಸಮಿತಿ ಮುಖಂಡರಾದ ದಿನೇಶ್ ಬೊಂಡಂತಿಲ, ಪ್ರವೀಣ್ ಮಜಲು, ಸತೀಶ್ ತಾರಿಗುಡ್ಡೆ, ಜೈ ಶಂಕರ್ ಮಿತ್ರ ಮಂಡಳಿಯ ಗೌರವ ಅಧ್ಯಕ್ಷರಾದ ಲಿಂಗಪ್ಪ ಸಾಲಿಯನ್, ರೈತ ಮುಖಂಡರಾದ ಬಾಬು ಸಾಲಿಯನ್, ಶೇಖರ ಗಂಪ, ಬೋಜ ದೇವಸ ಕಾರ್ಮಿಕ ಮುಖಂಡರಾದ ಹೊನ್ನಯ್ಯ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article