ನಾಳೆ ಉಳ್ಳಾಲ ದಸರಾ ಕಬಡ್ಡಿ

ನಾಳೆ ಉಳ್ಳಾಲ ದಸರಾ ಕಬಡ್ಡಿ

ಮಂಗಳೂರು: ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಉಳ್ಳಾಲ, ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲ ಹಾಗೂ ಉಳ್ಳಾಲ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದೊಂದಿಗೆ ಅ.4 ರಂದು ಉಳ್ಳಾಲ ಪುರಸಭೆ ಮೈದಾನದಲ್ಲಿ ದಿ. ರವೀಂದ್ರ ಮರೋಳಿ ಸ್ಮರಣಾರ್ಥ 23 ವರ್ಷದೊಳಗಿನವರ ‘ಉಳ್ಳಾಲ ದಸರಾ ಕಬಡ್ಡಿ-2026’ ನಡೆಯಲಿದೆ.

ಅ.11 ರಂದು ನಡೆಯುವ ಕ್ರೀಡಾ ಸ್ಪರ್ಧೆಗಳು:

ಭಾರತ್ ಪ್ರೌಢಶಾಲಾ ಮೈದಾನದಲ್ಲಿ ದಿ. ಟಿ. ದೇಜಪ್ಪ ಮತ್ತು ದಿ. ಯು.ಆರ್. ಚಂದರ್ ಸ್ಮರಣಾರ್ಥ ಆಟೋಟ ಸ್ಪರ್ಧೆಗಳು ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಹಾಗೂ ದಿ. ಪ್ರಭಾಕರ ರಾವ್ ಗುಡ್ಡೆಹಿತ್ಲು ಸ್ಮರಣಾರ್ಥ ಪ್ರೌಢ ಶಾಲಾ ಬಾಲಕಿಯರಿಗಾಗಿ ಕಬಡ್ಡಿ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ.

ಅ.16 ರಂದು ಉಳ್ಳಾಲದ ಶಾರದಾ ನಿಕೇತನದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ದಿ. ಸುರೇಂದ್ರ ಕರ್ಕೇರ ಸ್ಮರಣಾರ್ಥ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಅ.18 ರಂದು ಸಾರ್ವಜನಿಕ ರಸಪ್ರಶ್ನೆ ಸ್ಪರ್ಧೆ ಹಾಗೂ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ.

ಪ್ರೊ. ಗಿಲ್ ರಾಜ್, ಆಸ್ಟ್ರೇಲಿಯಾ ಮತ್ತು ಮನೆಯವರು ಪ್ರಾಯೋಜಕತ್ವದಲ್ಲಿ ಅ.18 ರಂದು ಬೆಳಗ್ಗೆ 9 ಗಂಟೆಯಿಂದ ಶಾರದಾ ನಿಕೇತನ ಸಭಾಂಗಣದಲ್ಲಿ ಸಾರ್ವಜನಿಕರಿಗಾಗಿ ಮುಕ್ತ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಅಲ್ಲದೆ ಮಧ್ಯಾಹ್ನ 2.30 ರಿಂದ ದಿ. ಪೈಲ್ವಾನ್ ಮೋತಿ ಪುತ್ರನ್ ಸಂಸ್ಮರಣಾರ್ಥ ‘ಕುಣಿತ ಭಜನಾ ಸ್ಪರ್ಧೆ’ಯು ಪ್ರೊ. ಅರುಣ್ ಉಳ್ಳಾಲ್ ಸಂಯೋಜನೆಯಲ್ಲಿ ನಡೆಯಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಶ್ರೀಕಾಂತ್ ಅರಸುಹಿತ್ಲು ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಯು.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article