ಮೂಡುಬಿದಿರೆ ಗಾಂಧಿನಗರ ಶಾಲೆಯಲ್ಲಿ ಗಾಂಧೀ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಮೂಡುಬಿದಿರೆ ಗಾಂಧಿನಗರ ಶಾಲೆಯಲ್ಲಿ ಗಾಂಧೀ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ


ಮೂಡುಬಿದಿರೆ: ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರದಲ್ಲಿ  ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ  ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.


ವಿದ್ಯಾರ್ಥಿನಿಯರಾದ ಮೇಘನಾ ಹಾಗೂ ಕೃತಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಾದ ಕೃತಿ, ಮೇಘನಾ, ಸೃಜನ್, ಜಿಯಾ, ಧನ್ಯಶ್ರೀ ಹಾಗೂ ಅಖಿಲಾ ದೇಶಭಕ್ತಿ ಗೀತೆ ಹಾಡಿದರು.ವಿದ್ಯಾರ್ಥಿಗಳಾದ ಸಾತ್ವಿಕ್ ಶೆಟ್ಟಿ, ವಿಠ್ಠಲ, ಯಶ್ವಿತಾ, ಸಾನ್ವಿಕಾ, ವಿಹಾನ್ ಅಂಚನ್, ವಿಧಿತ್, ದೀಕ್ಷಾ, ಆದಿಲ್, ತರುಣ್ ಹಾಗೂ ವಿವೇಕ್ ಗಾಂಧೀಜಿ ಸತ್ಯಾಗ್ರಹದ ರೂಪಕ ಪ್ರದರ್ಶಿಸಿದರು.

ಮುಖ್ಯ ಶಿಕ್ಷಕಿ ಕಸ್ತೂರಿ ಎಚ್. ಶಿಕ್ಷಕಿಯರಾದ ಭವ್ಯ. ಕೆ, ಸುಪ್ರೀತಾ, ಸುಮಾ, ಪ್ರವೀಣಾ ಹೆಗ್ಡೆ,ಅಂಗನವಾಡಿ ಶಿಕ್ಷಕಿ ಜಯಂತಿ, ಸಹಾಯಕಿ ಅಕ್ಷತಾ, ಆಳ್ವಾಸ್  ಬಿಎಡ್ ವಿದ್ಯಾರ್ಥಿನಿಗಳಾದ ಮೋನಿಷಾ, ಸುಜನ್ಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ಪೂಜಾ, ಉಪಾಧ್ಯಕ್ಷೆ ಮಲ್ಲಿಕಾ, ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

ಶಾಲಾ ನಾಯಕಿ ಕುಮಾರಿ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article