ಜಾಂಡಿಸ್ಗೆ ಹೆಡ್ ಕಾನ್ಸ್ಟೇಬಲ್ ಬಲಿ
Wednesday, October 14, 2026
ಮಂಗಳೂರು: ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಜೇಸಿತ್ ಕುಮಾರ್ (38) ಜಾಂಡಿಸ್ ಕಾಯಿಲೆಗೆ ತುತ್ತಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
2008ರ ಡಿಎಆರ್ ಕಾನ್ಸ್ ಟೇಬಲ್ ಆಗಿ ನಂತರ 2011ರಲ್ಲಿ ಸಿವಿಲ್ ಪೊಲೀಸ್ ಪರೀಕ್ಷೆ ಬರೆದು ಕಾನ್ಸ್ ಟೇಬಲ್ ಹುದ್ದೆಗೆ ಸೇರ್ಪಡೆಯಾಗಿದ್ದರು. ಮೊದಲಿಗೆ ಕದ್ರಿ ಠಾಣೆಯಲ್ಲಿ ಆನಂತರ ದಕ್ಷಿನ ಟ್ರಾಫಿಕ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಕೆಲವು ಸಮಯದಿಂದ ಕಾಯಿಲೆಗೆ ತುತ್ತಾಗಿದ್ದು ಜಾಂಡಿಸ್ ಗೆ ತಿರುಗಿತ್ತು. ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಜೇಸಿತ್ ಕುಮಾರ್ ಮಂಗಳೂರು ಹೊರವಲಯದ ನೀರುಮಾರ್ಗ ನಿವಾಸಿಯಾಗಿದ್ದು ನಗರದ ಕ್ಚಾಟ್ರಸ್ ನಲ್ಲಿ ಪತ್ನಿ ಮಕ್ಕಳೊಂದಿಗೆ ನೆಲೆಸಿದ್ದರು. ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.