ಪ್ರಾಧ್ಯಾಪಕಿ ಪ್ರೊ. ಶಿಲ್ಪಾಗೆ ಪಿಎಚ್.ಡಿ ಪದವಿ
Wednesday, October 7, 2026
ಮಂಗಳೂರು: ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕಾಮರ್ಸ್‌ನ ಬಿಬಿಎ ವಿಭಾಗದ ಮುಖ್ಯಸ್ಥೆ ಶಿಲ್ಪಾ ಕೆ. ಮಂಡಿಸಿದ ಕಸ್ಟಮರ್ ಸ್ಯಾಟಿಸ್‌ಫ್ಯಾಕ್ಷನ್ ಟುವರ್ಡ್ಸ್ ಆನ್‌ಲೈನ್ ಬ್ಯಾಂಕಿಂಗ್ ಸರ್ವೀಸಸ್ ಆಫ್ ಕಮರ್ಷಿಯಲ್ ಬ್ಯಾಂಕ್ಸ್ (ವಾಣಿಜ್ಯ ಬ್ಯಾಂಕುಗಳ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳ ಕುರಿತು ಗ್ರಾಹಕರ ತೃಪ್ತಿ) ವಿಷಯದ ಕುರಿತ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.
ಇವರು ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ಸಿ.ಕೆ.ಹೆಬ್ಬಾರ್ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.
ಡಾ. ಶಿಲ್ಪಾ ಕೆ. ಕುದ್ರೋಳಿಯ ಸುರೇಶ್ ಕೆ. ಹಾಗೂ ವಿಜಯಾ ಆರ್.ಕೆ. ದಂಪತಿ ಪುತ್ರಿ.