ಎಂಆರ್‌ಪಿಎಲ್, ಎಂಎಸ್‌ಇಝೆಡ್ ಸಮಸ್ಯೆ ಬಗೆಹರಿಸಲು ಮನವಿ
ಎಂಆರ್‌ಪಿಎಲ್ ಎಂ ಎಸ್ ಸಿ ಝೆಡ್ ಗುತ್ತಿಗೆ ಕಾರ್ಮಿಕರ ಹಾಗೂ ಸಂಪ್ರಾ ಹೋರಾಟ ಸಮಿತಿ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರ ನೇತೃತ್ವದಲ್ಲಿ ಈ ಮನವಿ ಸಲ್ಲಿಸಲಾಯಿತು. ಪ್ರಧಾನ ಸಂಚಾಲಕರಾದ ಶಶಿರಾಜ್ ಶೆಟ್ಟಿ ಕೊಳಂಬೆ, ದಿನಕರ್ ಶೆಟ್ಟಿ, ಪ್ರಸನ್ನ ರವಿ, ಜೆಡಿಎಸ್ ಯುವ ಮುಖಂಡ ಅಕ್ಷಿತ್ ಸುವರ್ಣ, ರತೇಶ್ ಕರ್ಕೇರ, ಹಿತೇಶ್ ರೈ, ಆದರ್ಶ್ ನಾಲ್ಕನೇ ಹಂತದ ಹಿತ ರಕ್ಷಣಾ ಸಮಿತಿ ಪ್ರಮುಖರಾದ ಡೋನಿ ಸುವರಿಸ್, ಅಧ್ಯಕ್ಷರಾದ ಸುಧಾಕರ್ ಶೆಟ್ಟಿ, ಪ್ರವೀಣ್ ಪೆಮುದೆ, ಗುರುಮೂರ್ತಿ, ಮಾರ್ಕ್ ಡಿಸೋಜ, ಕೇಶವ ಶೆಟ್ಟಿ. ಎಂ ಅರ ಪಿ ಎಲ್ ಮದ್ದೂರ್ ಸಂಘ ಇದರ ಪ್ರಮುಖರಾದ ರೋಹಿತಾಶ್ವ, ಜಯಕುಮಾರ್ ಶೆಟ್ಟಿ, ಬಾಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಂಕರ್ ಜೋಗಿ, ಕಳವಾರ್ ಸಂತೃಪ್ತರ ಹೋರಾಟ ಸಮಿತಿಯ ಪ್ರಮುಖರಾದ ಸಂತೋಷ್ ಕೊರಯ್ಯ ಮತ್ತಿರ ಪ್ರಮುಖರು ಉಪಸ್ಥಿತರಿದ್ದರು.
ಪ್ರಮುಖ ಬೇಡಿಕೆಗಳು..
ಸಂಸ್ಥೆಯ ಸಂಸ್ಥೆಯೊಳಗೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ವೈದ್ಯಕೀಯ ಸೌಲಭ್ಯ ಹಾಗೂ ತುರ್ತು ಅವಘಡದ ಮಾಹಿತಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಈ ಹಿಂದೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಲಿಯಾದ ಕೇಶವ ಅವರ ಕುಟುಂಬಕ್ಕೆ ಸೂಕ್ತ ಉದ್ಯೋಗ ಮತ್ತು ಹೆಚ್ಚುವರಿ ಪರಿಹಾರ ಒದಗಿಸಬೇಕು.
4ನೇ ಹಂತದ ಭೂಸ್ವಾಧೀನದ ವೇಳೆ ನೀಡಿದ್ದ ಭರವಸೆಯಂತೆ ಭೂನಿರ್ವಸಿತರಿಗೆ ಉದ್ಯೋಗ ನೀಡಬೇಕು. ಜೊತೆಗೆ ಅರ್ಹ ಸ್ಥಳೀಯ ಅಭ್ಯರ್ಥಿಗಳಿಗೆ ನೇರ ಉದ್ಯೋಗಾವಕಾಶ ಮೀಸಲಿಡಬೇಕು. ಕಳವಾರ ನಿವಾಸಿಗಳಿಗೆ ಪರಿಹಾರ: ಇತ್ತೀಚೆಗೆ ಸಂಭವಿಸಿದ ಸ್ಫೋಟದ ದುರ್ಘಟನೆಯಿಂದ ಜೀವಭಯದಲ್ಲಿ ಕಾಲ ಕಳೆಯುತ್ತಿರುವ ಕಳವಾರ ನಿವಾಸಿಗಳ ಮನೆ ಮತ್ತು ಜಮೀನನ್ನು ಸರ್ಕಾರಿ ಅಧಿಸೂಚನೆ ಮೂಲಕ ಸ್ವಾಧೀನಪಡಿಸಿಕೊಂಡು ಎಂ.ಆರ್.ಪಿ.ಎಲ್. ಸಂಸ್ಥೆಯಿಂದ ಸೂಕ್ತ ಪರಿಹಾರ ಒದಗಿಸಬೇಕು.
ಆಸುಪಾಸಿನ ಗ್ರಾಮಗಳಲ್ಲಿ ವ್ಯಾಪಿಸಿರುವ ಕೊಳಚೆ ನೀರು ಮತ್ತು ದುರ್ವಾಸನೆಯ ಸಮಸ್ಯೆಯನ್ನು ತಕ್ಷಣ ನಿವಾರಿಸಬೇಕು. ಕಂಪನಿಯ ಸಿ.ಎಸ್.ಆರ್ ಶೇಕಡಾ 75% ಮೊತ್ತವನ್ನು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬೇಕು.
ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ವಿಶೇಷ ಸಮಿತಿಯನ್ನು ರಚಿಸಿ, ಪ್ರತಿ ಮೂರು ತಿಂಗಳಿಗೊಮ್ಮೆ ಪರಾಮರ್ಶೆ ಸಭೆ ನಡೆಸಬೇಕು. ಆಯ್ಕೆಯಾದ ಬೇಡಿಕೆಗಳಿಗೆ ಬರುವ ಅಕ್ಟೋಬರ್ 31, 2026 ರ ಒಳಗಾಗಿ ಜಿಲ್ಲಾಡಳಿತ ಹಾಗೂ ಸಂಸ್ಥೆಯು ಸೂಕ್ತ ಸ್ಪಂದನೆ ನೀಡದಿದ್ದಲ್ಲಿ, ಮುಂಬರುವ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೋರಾಟ ಸಮಿತಿ ಎಚ್ಚರಿಸಿದೆ.