ಮೈತ್ರಿ ಮಲ್ಲಿ ವಿಕಾಸ್: ಮಂಗಳೂರಿನಿಂದ ಪ್ಯಾರಿಸ್ ರನ್‌ವೇವರೆಗೆ ಸೌಂದರ್ಯ, ಆತ್ಮವಿಶ್ವಾಸ ಮತ್ತು ಹೆಮ್ಮೆಯ ಪಯಣ

ಮೈತ್ರಿ ಮಲ್ಲಿ ವಿಕಾಸ್: ಮಂಗಳೂರಿನಿಂದ ಪ್ಯಾರಿಸ್ ರನ್‌ವೇವರೆಗೆ ಸೌಂದರ್ಯ, ಆತ್ಮವಿಶ್ವಾಸ ಮತ್ತು ಹೆಮ್ಮೆಯ ಪಯಣ


ಮಂಗಳೂರು: ಪ್ಯಾರೀಸ್ ರನ್ ವೇ ವೀಕ್ 2026ರಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮಂಗಳೂರಿನ ಪುತ್ರಿ ಮೈತ್ರಿ ಮಲ್ಲಿ ವಿಕಾಸ್ ಅವರ ಸಾಧನೆ ಕರಾವಳಿಗೆ ಹೆಮ್ಮೆಯ ಸಂಗತಿ. ಅವರು ಸಾಗಿಬಂದ ದಾರಿ, ಪಟ್ಟ ಪರಿಶ್ರಮವೂ ವಿಶೇಷವಾದುದು.


ಸೌಂದರ್ಯ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಮಂಗಳೂರಿನ ಸಾಧನೆ ಕಡಿಮೆಯೇನಲ್ಲ. ಐಶ್ವರ್ಯಾ ರೈ ಅವರನ್ನು ಜಗತ್ತಿಗೆ ಪರಿಚಯಿಸಿದ್ದು ಕೂಡ ಇದೇ ಮಂಗಳೂರು. ಅಂಥ ಮಂಗಳೂರಿನ ಮೈತ್ರಿ ಮಲ್ಲಿ ವಿಕಾಸ್ ಅವರು ಕೂಡ ಈ ಸೌಂದರ್ಯ ಕ್ಷೇತ್ರದಲ್ಲಿ ಹೊಸ ಹೊಸ ಸಾಧನೆ ಮಾಡುತ್ತಲೇ ಇದ್ದಾರೆ.

ಆರಂಭ: ಮಿಸ್ ಮಂಗಳೂರು 2004

ಮೈತ್ರಿ ಮಲ್ಲಿ ವಿಕಾಸ್ ಅವರ ಸೌಂದರ್ಯ ಸ್ಪರ್ಧೆಯ ಪಯಣವು 2004ರಲ್ಲಿ ಅವರು ಮಿಸ್ ಮಂಗಳೂರು ಕಿರೀಟವನ್ನು ಮುಡಿಗೇರಿಸಿಕೊಂಡಾಗ ಆರಂಭವಾಯಿತು. ಸೌಂದರ್ಯ, ಫ್ಯಾಷನ್ ಮತ್ತು ಸಾರ್ವಜನಿಕ ಪ್ರತಿನಿಧಿತ್ವದೊಂದಿಗೆ ಅವರ ದೀರ್ಘ ಹಾಗೂ ಸ್ಫೂರ್ತಿದಾಯಕ ಸಂಬಂಧಕ್ಕೆ ಈ ಪ್ರಶಸ್ತಿ ನಾಂದಿ ಹಾಡಿತು.

ಇದು ಅವರಿಗೆ ಇನ್ನೂ ದೊಡ್ಡ ಸಾಧನೆಗೆ ಬುನಾದಿಯಾಯಿತು. ಈ ಅನುಭವ ಅವರಿಗೆ ಸಾರ್ವಜನಿಕ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳಲು, ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಹಾಗೂ ಒಂದು ಪ್ರಶಸ್ತಿಯ ಗೌರವವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಶಿಸ್ತು ಮತ್ತು ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡಿತು.

ಮಿಸ್ ಬಂಟ್ ವರ್ಲ್ಡ್-2013:

ಮಿಸ್ ಮಂಗಳೂರು ಪ್ರಶಸ್ತಿ ಪಡೆದ ಸುಮಾರು ಒಂದು ದಶಕದ ಬಳಿಕ, ಮೈತ್ರಿಯವರ ಸೌಂದರ್ಯ ಸ್ಪರ್ಧೆಯ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಮೂಡಿತು. 2013ರಲ್ಲಿ ಅವರು ಮಿಸ್ ಬಂಟ್ ವರ್ಲ್ಡ್ ಕಿರೀಟವನ್ನು ಮುಡಿಗೇರಿಸಿಕೊಂಡರು. 

ಮಿಸೆಸ್ ವರ್ಲ್ಡ್ ಇಂಟರ್‌ನ್ಯಾಷನಲ್-ಬ್ಯೂಟಿಫುಲ್ ಐಸ್ 2025:

2025ರಲ್ಲಿ ಮೈತ್ರಿ ಮಲ್ಲಿ ವಿಕಾಸ್ ಅವರು ಮಿಸೆಸ್ ವರ್ಲ್ಡ್ ಇಂಟರ್‌ನ್ಯಾಷನಲ್-ಬ್ಯೂಟಿಫುಲ್ ಐಸ್ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದು ತಮ್ಮ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದರು. 

ಭಾರತವನ್ನು ಪ್ಯಾರಿಸ್ ರನ್‌ವೇಗೆ ಕೊಂಡೊಯ್ದ ಮೈತ್ರಿ:

2026ರಲ್ಲಿ ಮೈತ್ರಿ ಮಲ್ಲಿ ವಿಕಾಸ್ ಅವರು ವಿಶ್ವದ ಅತ್ಯಂತ ಪ್ರಸಿದ್ಧ ಫ್ಯಾಷನ್ ವೇದಿಕೆಗಳಲ್ಲಿ ಒಂದಾದ ಪ್ಯಾರಿಸ್ ರನ್‌ವೇ ವೀಕ್ 2026ರಲ್ಲಿ ಗ್ಲಾಮರ್ ಗುರ್ಗಾಂವ್ ಬ್ಯಾನರ್ ಅಡಿಯಲ್ಲಿ ಭಾರತವನ್ನು ಹೆಮ್ಮೆಯಿಂದ ಪ್ರತಿನಿಧಿಸಿದರು.

ಪ್ಯಾರಿಸ್‌ನ ರನ್‌ವೇ ಮೇಲೆ ಹೆಜ್ಜೆ ಇಟ್ಟ ಕ್ಷಣವು ಅವರ ಪಯಣದ ಅತ್ಯಂತ ಮಹತ್ವದ ಕ್ಷಣಗಳಲ್ಲಿ ಒಂದಾಯಿತು.    

ಪ್ಯಾರಿಸ್‌ನ ರನ್‌ವೇ ಇವರಿಗೆ ಹೊಸ ಅವಕಾಶದ ಬಾಗಿಲನ್ನು ತೆರೆದುಕೊಂಡಿದೆ. ಎರಡು ದಶಕಗಳ ಬಳಿಕ ಭರ್ಜರಿಯಾಗಿಯೇ ಮತ್ತೆ ಹೊಸ ಸಾಧನೆ ಮಾಡುವುದು ಸಣ್ಣ ಸಂಗತಿಯೇನಲ್ಲ. ಇದಕ್ಕೆ ಅವರ ಕಠಿಣ ಪರಿಶ್ರಮ, ನಿರಂತರ ಸಿದ್ಧತೆ, ಬದ್ಧತೆ  ಇತ್ಯಾದಿಗಳು ಪ್ರಮುಖ ಕಾರಣಗಳಾಗಿವೆ. ಅವರಿಗೆ ಇನ್ನಷ್ಟು ಉತ್ತಮ ಅವಕಾಶಗಳು ಜಾಗತಿಕ ಮಟ್ಟದಿಂದ ಬರುವುದರಲ್ಲಿ ಸಂಶಯವಿಲ್ಲ. ಮಂಗಳೂರಿನ ಹೆಸರನ್ನು ಮತ್ತೆ ಮತ್ತೆ ವಿಶ್ವದಲ್ಲಿ ದಾಖಲಿಸಲು ಅವರಿಗೆ ಅವಕಾಶ ಸಿಗಲಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article