"ನನ್ಹೆ ಫರಿಶ್ತೆ” ಕಾರ್ಯಾಚರಣೆಯಡಿ 9 ವರ್ಷದ ಬಾಲಕನನ್ನು ರಕ್ಷಿಸಿದ ರೈಲ್ವೆ ರಕ್ಷಣಾ ಪಡೆ

"ನನ್ಹೆ ಫರಿಶ್ತೆ” ಕಾರ್ಯಾಚರಣೆಯಡಿ 9 ವರ್ಷದ ಬಾಲಕನನ್ನು ರಕ್ಷಿಸಿದ ರೈಲ್ವೆ ರಕ್ಷಣಾ ಪಡೆ

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ 9 ರ ಹರೆಯದ ಬಾಲಕನೋರ್ವನನ್ನು ಆರ್‌ಪಿಎಫ್ ಸಿಬ್ಬಂದಿಗಳು ರಕ್ಷಿಸಿ ಮಂಗಳೂರಿನ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದೆ.

ಪ್ರಾಥಮಿಕ ವಿಚಾರಣೆಯ ವೇಳೆ ಬಾಲಕನು ಪಶ್ಚಿಮ ಬಂಗಾಳದ ಮೂಲದವನೆಂದು  ತಿಳಿದು ಬಂದಿದ್ದು  ಮನೆಯಿಂದ ಹೊರಬಂದು ಈತ ರೈಲು ಸಂಖ್ಯೆ 22851 ಸಾಂತ್ರಾಗಾಚಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿರುವುದು ಕಂಡುಬಂದಿತ್ತು.

ಆರ್‌ಪಿಎಫ್ ಸಿಬ್ಬಂದಿ ಕುಮಾರಿ ವಿನಿಶಾ ಅವರು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಿಸಿಟಿವಿ ಕಣ್ಗಾವಲು ನಡೆಸುತ್ತಿದ್ದ ವೇಳೆ  ಅನುಮಾನಾಸ್ಪದ ಸ್ಥಿತಿಯಲ್ಲಿದ್ದ 9 ವರ್ಷದ ಬಾಲಕ ಕಂಡು ಬಂದಿದ್ದಾನೆ.

"ನನ್ಹೆ ಫರಿಶ್ತೆ” ಕಾರ್ಯಾಚರಣೆಯಡಿ ತಕ್ಷಣ ಕಾರ್ಯಪ್ರವೃತ್ತರಾದ ಆರ್‌ಪಿಎಫ್ ಸಿಬ್ಬಂದಿಗಳು ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಬಳಿಕ  ಬಾಲಕನ ಮುಂದಿನ ಆರೈಕೆ, ರಕ್ಷಣೆ ಮತ್ತು ಪುನರ್ವಸತಿಗಾಗಿ ಮಂಗಳೂರಿನ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ.

ಆರ್‌ಪಿಎಫ್ ಸಿಬ್ಬಂದಿ ತ್ವರಿತವಾಗಿ ಕೈಗೊಂಡ ಈ ಕ್ರಮವು ಮಕ್ಕಳ ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳುವಲ್ಲಿ ಭಾರತೀಯ ರೈಲ್ವೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಮೈಸೂರು ವಿಭಾಗೀಯ  ವಾಣಿಜ್ಯ ವ್ಯವಸ್ಥಾಪಕರಾದ ಗಿರೀಶ ಧರ್ಮರಾಜ ಕಲಗೊಂಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article