ಐದನೇ ವರ್ಷದ ಪಿಲಿ ಅಜನೆ ಕಾರ್ಯಕ್ರಮಕ್ಕೆ ಚಾಲನೆ
ಉದ್ಯಮಿ ಸೂರಜ್ ಕುಮಾರ್ ಕಲ್ಯ ಚಾಲನೆ ನೀಡಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಾತನಾಡಿ, “ಕಳೆದ ಐದು ವರ್ಷಗಳಿಂದ ಕಾರ್ಯಕ್ರಮಕ್ಕೆ ಭೇಟಿ ನೀಡುತ್ತಿದ್ದೇನೆ. ಬಹಳ ಶಿಸ್ತುಬದ್ಧವಾಗಿ ಹಾಗೂ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ‘ಪಿಲಿ ಅಜನೆ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆದಿದೆ.ತುಳುನಾಡಿನ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪಿಲಿ ಅಜನೆ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಅತ್ಯಂತ ಶ್ಲಾಘನೀಯ,’ ಎಂದರು.
ಶಾಸಕ ಭರತ್ ಶೆಟ್ಟಿ ಅವರು ಮಾತನಾಡಿ, “ಪಿಲಿ ಅಜನೆ ಕಾರ್ಯಕ್ರಮದ ಮೂಲಕ ತುಳುನಾಡಿನ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಶ್ರೀಮಂತ ರಾಜ ಗುಳಿಗ ಕ್ಷೇತ್ರ ಬಂದಲೆಯ ಧರ್ಮದರ್ಶಿ ಸತೀಶ್ ಬಂದಲೆ, ರಹೇಶ್, ಆಶ್ರಿತ್ ನೊಂಡ , ರಕ್ಷಿತ್ ಆರ್. ಪೂಜಾರಿ, ಯಶ್‌ಪಾಲ್ ಸಾಲಿಯಾನ್, ಸಚಿನ್ ಶೆಟ್ಟಿ, ರವೀಂದ್ರ, ತಿಲಕ್ ರಾಜ್,ಕಾರ್ತಿಕ್, ರಂಜಿತ್, ಹಿತೇಶ್ ಬೇಕಲ್, ವಿನೋದ್ ಹರ್ಷಿತ್, ಜಯೇಶ್, ಅನಿಲ್ ಕರ್ಕೇರ ಉಪಸ್ಥಿತರಿದ್ದರು.
ಪೊಳಲಿ ಟೈಗರ್ಸ್ ತಂಡದ ಮಾಲಕ ಪೊಳಲಿ ಸಂತು, ಬರ್ಕೆ ಫ್ರೆಂಡ್ಸ್ ತಂಡದ ಮಾಲೀಕರಾದ ಯಜ್ಞೇಶ್ವರ ಬರ್ಕೆ ಹಾಗೂ ಮನೋಜ್ ಕುಮಾರ್ ಅವರನ್ನು ಗೌರವಿಸಲಾಯಿತು.
ಸಾಯಿ ಚೆಂಡೆ ಟ್ರೂಪ್ ಬಳಗದಿಂದ ಚೆಂಡೆ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ವೇದಿಕೆಯಲ್ಲಿ ಗ್ರೂಪ್ ಎಕ್ಸ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ವೈಭವ, ಭಕ್ತಿಭಾವದ ಸಂಗಮವಾಗಿ ಗುರುಕುಲ ಬಾಲಗೋಕುಲ ಪಾವೂರು ಹರೇಕಳ ತಂಡದಿಂದ ಕುಣಿತ ಭಜನೆ ಹಾಗೂ ಬರ್ಕೆ ಫ್ರೆಂಡ್ಸ್ ತಂಡದಿಂದ ಸಾಹಸಮಯ ಹುಲಿ ಕುಣಿತ ಪ್ರದರ್ಶನ ನಡೆಯಿತು. ಮನೋಜ್ ಕಾರ್ಯಕ್ರಮ ನಿರ್ವಹಿಸಿದರು.