ಮರಿ ಆನೆ ಸಾವು

ಮರಿ ಆನೆ ಸಾವು

ಸುಳ್ಯ: ತೊಡಿಕಾನ ಗ್ರಾಮದ ಹರ್ಲಡ್ಕದಲ್ಲಿ ಸುಮಾರು ಒಂದು ವರ್ಷದ ಪ್ರಾಯದ ಆನೆ ಮರಿಯೊಂದು ಸಾವಿಗೀಡಾದ ಘಟನೆ ನಡೆದಿದೆ.

ಹರ್ಲಡ್ಕದ ಚಂದ್ರಶೇಖರ ಎಂಬವರ ತೋಟದಲ್ಲಿ ಆನೆ ಮರಿ ಮೃತಪಟ್ಟಿದ್ದು, ಭಾಗಮಂಡಲದ ಮೀಸಲು ಅರಣ್ಯದಿಂದ ಬಂದ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಕಾಫಿ ಹಾಗೂ ಬಾಳೆ ಕೃಷಿಗೆ ಹಾನಿ ಉಂಟುಮಾಡಿದೆ ಎಂದು ತಿಳಿದುಬಂದಿದೆ. ತೋಟವು ಎತ್ತರವಾದ ಪ್ರದೇಶದಲ್ಲಿರುವುದರಿಂದ ಆನೆಗಳ ಹಿಂಡು ಮರಳಿ ಕಾಡಿನತ್ತ ತೆರಳುವ ಸಂದರ್ಭದಲ್ಲಿ ಆನೆ ಮರಿ ಜಾರಿ ಬಿದ್ದಿದೆ.

ಈ ವೇಳೆ ಹಿಂಡಿನಲ್ಲಿದ್ದ ಇತರ ಆನೆಗಳು ಮರಿಯನ್ನು ಮೆಟ್ಟಿದ್ದರಿಂದ ಅದು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಆನೆ ಮರಿಯ ಸಾವಿಗೆ ನಿಖರವಾದ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article