ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕನಸ್ಸುಗಳಿದ್ದಷ್ಟೇ ಸವಾಲುಗಳಿವೆ: ಪ್ರೊ. ಸುನೀತಾ ವಿ.

ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕನಸ್ಸುಗಳಿದ್ದಷ್ಟೇ ಸವಾಲುಗಳಿವೆ: ಪ್ರೊ. ಸುನೀತಾ ವಿ.


ಮಂಗಳೂರು: ಇಂದಿನ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯವರ್ಧನೆ, ವ್ಯಕ್ತಿತ್ವ ವಿಕಸನ, ಔದ್ಯೋಗಿಕತೆ, ಸಾಮಾಜಿಕ ಚಲನೆ, ವೈಚಾರಿಕತೆ ಹಾಗೂ ರಾಷ್ಟ್ರೀಯ ಅಭಿವೃದ್ಧಿಯ ಕನಸಗಳನ್ನು ಹೊಂದಿದೆ ಎಂದು ಸಮಾಜಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕಿ ಡಾ. ಸುನೀತಾ ವಿ. ಹೇಳಿದರು.

ಅವರು ಇಂದು ಇಲ್ಲಿನ ರಥಬೀದಿಯ ಡಾ.ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಜರುಗಿದ ಮಂಗಳೂರು ಸಮಾಜಶಾಸ್ತ್ರ ಸಂಘ ಹಮ್ಮಿಕೊಂಡಿದ್ದ ವಾಸುದೇವ ಕಾಮತ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣದ ಕನಸುಗಳಿಗೆ ತೊಡಕಾಗಿರುವ ಇಲ್ಲಿನ ಆರ್ಥಿಕ ಅಸಮಾನತೆ, ಸಾಮಾಜಿಕ ತಾರತಮ್ಯ, ಗ್ರಾಮೀಣ ಹಾಗೂ ನಗರ ಅಂತರ, ಭಾಷಾ ಹಿನ್ನಲೆ ಮತ್ತು ಬೋಧಕರ ಕೊರತೆ ಕಾರಣಗಳಾಗಿವೆ ಎಂದು ಅವರು ಪ್ರತಿಪಾದಿಸಿದರು.

ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕರಾದ ಡಾ. ಗಿರಿಧರ್ ರಾವ್ ಎಂ.ಎಸ್. ಅವರು ಪ್ರೊ. ರಿಚರ್ಡ್ ಪಾಯಸ್ ಸಂಪಾದಿಸಿದ ``GENDER, SANITATION AND MENSTRUAL HEALTH'' ಪುಸ್ತಕವನ್ನು ಬಿಡುಗಡೆಗೊಳಿಸಿದರು. ಅದೇ ಸಂದರ್ಭದಲ್ಲಿ ಸಮಾಜಶಾಸ್ತ್ರ ಸಂಘಟನೆಯ ನಿಯತಕಾಲಿಕೆ ಸಮಾಜ ಶೋಧನವನ್ನು ಮಂಗಳೂರು ವಿವಿ ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ವಿನಯ್ ರಜತ್ ಬಿಡುಗಡೆಗೊಳಿಸಿದರು. 

ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ರಿಚರ್ಡ್ ಪಾಯಸ್ ಮತ್ತು ನಿವೃತ್ತ ಪ್ರಾಧ್ಯಾಪಕಿ ಪ್ರೊ. ಲಕ್ಷ್ಮೀಬಾಯಿ ಇವರನ್ನು ಗೌರವಿಸಲಾಯಿತು. 

ಐಕ್ಯೂಎಸಿ ಸಂಯೋಜಕ ದೇವಿ ಪ್ರಸಾದ್, ಸಹ ಸಂಚಾಲಕಿ ಡಾ. ಜ್ಯೋತಿಪ್ರಿಯ ಉಪಸ್ಥಿತರಿದ್ದರು. ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ದುಗ್ಗಪ್ಪ ಕಜೆಕಾರ್ ಸ್ವಾಗತಿಸಿ, ಸಮಾಜಶಾಸ್ತ್ರ ಸಂಘದ ಕಾರ್ಯದರ್ಶಿ ರಾಜೇಂದ್ರ ಕೆ. ವಂದಿಸಿದರು. ಸಂಘದ ಸದಸ್ಯರು ದತ್ತಿ ಉಪನ್ಯಾಸದ ಪ್ರಯೋಜನ ಪಡೆದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article