ರಚನಾ ಅವರಿಗೆ ಪಿಎಚ್.ಡಿ. ಪದವಿ
Tuesday, October 6, 2026
ಮಂಗಳೂರು: ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯವು ರಚನಾ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿ ನೀಡಿದೆ.
ರಚನಾ ಅವರು “Unveiling the Shopping Tendencies of Customers Towards Online Impulsive Buying Intentions” ವಿಷಯದಲ್ಲಿ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕಿ ಡಾ. ಸುಜಯಾ ಎಚ್. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.
ಅವರ ಸಂಶೋಧನಾ ಮಹಾಪ್ರಬಂಧವನ್ನು ವಿಶ್ವವಿದ್ಯಾಲಯ ಅಂಗೀಕರಿಸಿದ್ದು, ಅಕ್ಟೋಬರ್ 5ರಂದು ಪಾಂಡೇಶ್ವರ ಸಿಟಿ ಕ್ಯಾಂಪಸ್‌ನಲ್ಲಿ ಮುಕ್ತ ಮೌಖಿಕ ಪರೀಕ್ಷೆ ನಡೆಯಿತು.
ರಚನಾ ಅವರು ನಿಟ್ಟೆಯ ಡಾ. ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಮಂಗಳೂರಿನ ಚಾಮರ ಫೌಂಡೇಶನ್ (ರಿ.) ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರು ಮಾಜಿ ಕಾರ್ಪೊರೇಟರ್ ರಾಜೀವ್ ಕಾಂಚನ್ ಮತ್ತು ಮೀನಾಕ್ಷಿ ಸುವರ್ಣ ಅವರ ಪುತ್ರಿ, ಸ್ಕ್ಲೆರಾ ಪ್ರೈವೇಟ್ ಲಿಮಿಟೆಡ್‌ನ ಕಾನೂನು, ಮಾನವ ಸಂಪನ್ಮೂಲ ಮತ್ತು ಕಾರ್ಯಾಚರಣೆ ವಿಭಾಗದ ವ್ಯವಸ್ಥಾಪಕ ಮನೀಶ್ ಕೆ. ಸಾಲಿಯಾನ್ ಅವರ ಪತ್ನಿ.