ಸಂತ ಫಿಲೋಮಿನಾ ಪ ಪೂ ಕಾಲೇಜಿನಲ್ಲಿ 'ಕೃತಕ ಬುದ್ಧಿಮತ್ತೆ- ಭವಿಷ್ಯ ಮತ್ತು ಸವಾಲುಗಳು' ಕುರಿತು ಕಾರ್ಯಗಾರ

ಸಂತ ಫಿಲೋಮಿನಾ ಪ ಪೂ ಕಾಲೇಜಿನಲ್ಲಿ 'ಕೃತಕ ಬುದ್ಧಿಮತ್ತೆ- ಭವಿಷ್ಯ ಮತ್ತು ಸವಾಲುಗಳು' ಕುರಿತು ಕಾರ್ಯಗಾರ


ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಐಟಿ ಕ್ಲಬ್ ನ ಆಶ್ರಯದಲ್ಲಿ ಅ.3 ರಂದು 'ಕೃತಕ ಬುದ್ಧಿಮತ್ತೆ- ಭವಿಷ್ಯ ಮತ್ತು ಸವಾಲುಗಳು' ಕುರಿತು ಕಾರ್ಯಗಾರವು ಕಾಲೇಜು ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಶ್ರೀನಿವಾಸ್ ಹೆಗ್ಡೆ ಮಾತನಾಡಿ, ಕೃತಕ ಬುದ್ಧಿಮತ್ತೆ ಇಂದು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದು ಇದರ ಉಪಯೋಗಗಳು ಅಪಾರ. ಕೇವಲ ದಿನನಿತ್ಯದ ಉಪಯೋಗಗಳು ಅಷ್ಟೇ ಅಲ್ಲದೆ, ವೈಜ್ಞಾನಿಕ ಉಪಯೋಗಗಳ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು. ಭವಿಷ್ಯದಲ್ಲಿ ಎ ಐ ಮಾನವನ ಬುದ್ಧಿಮತ್ತೆಗೆ ಸವಾಲಾಗಿದ್ದು, ಅತ್ಯಂತ ಜಾಗರೂಕತೆಯಿಂದ ಉಪಯೋಗಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಕೃತಕ ಬುದ್ಧಿಮತ್ತೆ ಎಂಬುದು ಇಂದಿನ ಯುವಕರು ಕಡ್ಡಾಯವಾಗಿ ಕಲಿಯಬೇಕಾದ ಪಾಠವಾಗಿದ್ದು, ಇದರ ವ್ಯಾಪ್ತಿಯು ವಿಶಾಲವಾಗಿದೆ. ಎ ಐ ಇಂದು ನಮಗೆ ಎಷ್ಟು ಉಪಯುಕ್ತವೋ ಅಷ್ಟೇ ಸವಾಲುಗಳನ್ನು ನಮ್ಮ ಮುಂದೆ ಇರಿಸಿದೆ. ನಾವು ಸವಾಲುಗಳನ್ನು ಮೆಟ್ಟಿ ನಿಂತರೆ ಎ ಐ ಉಪಯುಕ್ತತೆ ಇನ್ನಷ್ಟು ಹೆಚ್ಚಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕಂಪ್ಯೂಟರ್ ವಿಭಾಗದ ಉಪನ್ಯಾಸಕರಾದ ಗೋವಿಂದ್ ಪ್ರಕಾಶ್ ಸಿ ಎಚ್, ಯಶಸ್ವಿನಿ ಎಂ. ಎಸ್  ಹಾಗೂ ವೀಕ್ಷಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೋಧಕ/ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕರಾದ ಯಶಸ್ವಿನಿ ಎಂ ಎಸ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ಶಾನ್ ವಂದಿಸಿ, ಸಮೀಕ್ಷಾ ಅಕ್ಷರ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article