ಬೇಡಿಕೆ ಈಡೇರದಿದ್ದರೆ ಎಂಆರ್‌ಪಿಎಲ್ ಚಲೋ ಹೋರಾಟ: ಸತ್ಯಜಿತ್ ಸುರತ್ಕಲ್ ಎಚ್ಚರಿಕೆ

ಬೇಡಿಕೆ ಈಡೇರದಿದ್ದರೆ ಎಂಆರ್‌ಪಿಎಲ್ ಚಲೋ ಹೋರಾಟ: ಸತ್ಯಜಿತ್ ಸುರತ್ಕಲ್ ಎಚ್ಚರಿಕೆ


ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ದೊರೆಯುವ ಕಾರ್ಮಿಕ ಪರಿಹಾರ ಮೊತ್ತವನ್ನು 10 ಲಕ್ಷ ರೂ.ನಿಂದ 25 ಲಕ್ಷ ರೂ.ಗೆ ಹೆಚ್ಚಿಸಬೇಕು, ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಮೃತಪಟ್ಟರೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂಬುದು ಸೇರಿದಂತೆ ಕಾರ್ಮಿಕ ಎಲ್ಲ ಬೇಡಿಕೆ, ಸಮಸ್ಯೆಗಳ ಪರಿಹಾರದ ಬಗ್ಗೆ ಒಂದು ವಾರದ ಒಳಗಾಗಿ ಸ್ಪಷ್ಟ ಉತ್ತರ ದೊರೆಯದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಎಂಆರ್‌ಪಿಎಲ್ ಚಲೋ ಹೋರಾಟ ನಡೆಸಲಾಗುವುದು ಎಂದು ಎಂಆರ್Uಪಿಎಲ್ ಮಜ್ದೂರ್ ಸಂಘದ ಗೌರವಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಎಚ್ಚರಿಸಿದರು.

ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ ಎಚ್ಚರ ತಪ್ಪಿದರೆ ಅದು ಯಾವತ್ತಿಗೂ ಜೀವಂತ ಜ್ವಾಲಾಮುಖಿಯಾಗಿದ್ದು, ಯಾವಾಗ ಬೇಕಾದರೂ ಸೋಟ ಆಗಬಹುದು. ಹಾಗಾಗಿ ಅಲ್ಲಿ ದುಡಿಯುವ ಕಾರ್ಮಿಕ ವರ್ಗದ ಹಿತರಕ್ಷಣೆ, ಜಿಲ್ಲೆಯ ಜನರ ಸುರಕ್ಷತೆಯನ್ನು ಸಂಸ್ಥೆ ಖಾತರಿಪಡಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಸಂಸ್ಥೆಯ ಸಿಎಚ್ಟಿಯು ಘಟಕದಲ್ಲಿ ಸಂಭವಿಸಿದ ಬೆಂಕಿ ದುರಂತ ಭಾರೀ ಅಪಾಯದ ಆತಂಕವನ್ನು ನೀಡಿದ್ದು, ಒಂದು ವೇಳೆ ಅಮೋನಿಯ ಅಥವಾ ನಾ- ತಯಾರಾಗುತ್ತಿದ್ದ ಘಟಕದಲ್ಲಿ ಆ ಘಟನೆ ನಡೆದಿದ್ದರೆ ಜಿಲ್ಲೆಯ ಪರಿಸ್ಥಿತಿ ಹೇಗಿರುತ್ತಿತ್ತು ಎಂದವರು ಆತಂಕ ವ್ಯಕ್ತಪಡಿಸಿದರು.

ಎಂಆರ್‌ಪಿಎಲ್ ಗುತ್ತಿಗೆ ನೌಕರರ ಜತೆ ಬೇಜವಾಬ್ಧಾರಿಯಿಂದ ನಡೆದುಕೊಳ್ಳಲಾಗುತ್ತಿದ್ದು, ಬ್ರಿಟಿಷರ ಕಾಲದ ಕಾನೂನನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲಿರುವ ಶೌಚಾಲಯ ಗುತ್ತಿಗೆ ಕಾರ್ಮಿಕರು ಬಳಸುವಂತಿಲ್ಲ. ಮಹಿಳಾ ಕಾರ್ಮಿಕರಿಗೆ ಬಟ್ಟೆ ಬದಲಾಯಿಸಲು ಸೂಕ್ತ ವ್ಯವಸ್ಥೆ ಹಾಗೂ ವಿಶ್ರಾಂತಿ ಕೊಠಡಿ ಇಲ್ಲ. ಧ್ವನಿ ಎತ್ತಿದರೆ ಅಂತಹ ಕಾರ್ಮಿಕರನ್ನು ರೊಟೇಶನ್ ನೆಪದಲ್ಲಿ ಬೇರೆಡೆ ಕಳುಹಿಸುವ ಕಾರ್ಯ ನಡೆಯುತ್ತದೆ. ಸುರಕ್ಷತೆಯ ಹೆಸರಿನಲ್ಲಿ ಕಾರ್ಮಿಕರು ಮೊಬೈಲ್ ಬಳಸಲು ಅವಕಾಶವಿಲ್ಲ. ಆದರೆ, ಯಾವುದೇ ಸುರಕ್ಷತೆಯ ಮಾನದಂಡಗಳನ್ನು ಅನುಸರಿಸದೆ ಅಲ್ಲಿನ ಖಾಯಂ ನೌಕರರು ಮೊಬೈಲ್ ಪೋನ್ ಬಳಸುತ್ತಾರೆ ಎಂದು ದೂರಿದರು.

ಕಳೆದ ಸುಮಾರು 15 ವರ್ಷಗಳಿಂದ ದುಡಿಯುತ್ತಿರುವ ಗುತ್ತಿಗೆ ನೌಕರರನ್ನು ವಿದ್ಯಾರ್ಹತೆಯ ಸಬೂಬು ನೀಡಿ ಕೆಲಸದಿಂದ ತೆಗೆಯುವ ಹುನ್ನಾರ ನಡೆಯುತ್ತಿದೆ. ಅಂತಹ ಕಾರ್ಯ ಮಾಡದೆ ಕಂಪನಿಗೆ ವತಿಯಿಂದಲೇ ಸೂಕ್ತ ತರಬೇತಿ ನೀಡಿ ಅವರನ್ನು ಅದೇ ಕೆಲಸದಲ್ಲಿ ಮುಂದುವರಿಸಬೇಕು. ಇತ್ತೀಚಿನ ದುರ್ಘಟನೆಯ ಬಳಿಕ ಪರಿಸರದ ಜನರು ಜೀವಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರಿಗೆ ಉದ್ಯೋಗ ಇಲ್ಲವಾಗಿದೆ. ಈ ಸಮಸ್ಯೆ ನಿವಾರಿಸಲು ಸಂಸ್ಥೆಯ ಪ್ರಮುಖರ ಜತೆಗೆ ಜಿಲ್ಲಾಧಿಕಾರಿ,  ಜನಪ್ರತಿನಿಽಗಳು ಹಾಗೂ ನಮ್ಮನ್ನು ಸೇರಿಸಿಕೊಂಡು ಮೂರು ತಿಂಗಳಿಗೊಮ್ಮೆ ಪರಾಮರ್ಶೆ ಸಭೆ ನಡೆಸಬೇಕು. ಕೇಂದ್ರ ಸರಕಾರದ ಜತೆ ರಾಜ್ಯ ಸರಕಾರ ಕೂಡಾ ಈ ಬಗ್ಗೆ ಗಮನ ಹರಿಸಬೇಕು. ಕಾರ್ಮಿಕರ ಸಮಸ್ಯೆ ಮತ್ತು ಪರಿಹಾರದ ಸಂದರ್ಭ ನೌಕರರ ಸಂಘಟನೆ ಜತೆಗೆ ನಮಗೂ ಮಾಹಿತಿಗಳನ್ನು ನೀಡಿ, ಸಮಾಲೋಚನೆ ನಡೆಸಬೇಕು ಎಂದರು.

ಎಂಆರ್‌ಪಿಎಲ್‌ನ ಗುತ್ತಿಗೆ ಕಾರ್ಮಿಕರ ಸ್ಥಿತಿಗತಿ, ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಇಲ್ಲಿನ ಸಂಸದರಿಗೆ ಯಾವುದೇ ಮಾಹಿತಿ ಇಲ್ಲ. ಎಂಆರ್ಪಿಎಲ್ ಅಽಕಾರಿಗಳು ನೀಡಿದ ಮಾಹಿತಿಯನ್ನೇ ಸತ್ಯ ಎಂಬುದಾಗಿ ಅವರು ನಂಬುತ್ತಿದ್ದಾರೆ. ಎಂಆರ್‌ಪಿಎಲ್ ಮಜ್ದೂರ್ ಸಂಘದಂತಹ ಕಾರ್ಮಿಕ ಸಂಘಗಳ ಅಹವಾಲು ಆಲಿಸಿದರೆ ಸಂಸದರಿಗೆ ವಾಸ್ತವ ಚಿತ್ರಣ ಸಿಗಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಟಿಎಂಎಸ್‌ನ ಜಿಲ್ಲಾಧ್ಯಕ್ಷ ಯಶ್ಪಾಲ್, ಎತ್ತಿನಹೊಳೆ ಹೋರಾಟ ಸಮಿತಿ ಸಂಚಾಲಕ ಶಶಿರಾಜ್ ಶೆಟ್ಟಿ ಕೊಳಂಬೆ, ತುಳುನಾಡು ರಕ್ಷಣಾ ವೇದಿಕೆಯ ಪ್ರಶಾಂತ್ ಭಟ್, ಅಮರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article