100ನೇ ಯೋಜನೆಯ ಸಂಭ್ರಮದಲ್ಲಿ ಸಾಯಿ ಮಾನಾ೯ಡ್ ಸೇವಾ ಸಂಘ: ನ.1ರಂದು ನವೀಕರಿಸಿದ ಮನೆ ಹಸ್ತಾಂತರ, 5 ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ
Friday, October 30, 2026
ಮೂಡುಬಿದಿರೆ: ಅನಾರೋಗ್ಯ ಪೀಡಿತರ ಚಿಕಿತ್ಸೆಗೆ, ಶಿಕ್ಷಣಕ್ಕೆ ಹಾಗೂ ಅಸಕ್ತ ಕುಟುಂಬಗಳಿಗೆ ಮಾನವೀಯತೆಯ ನೆಲೆಯಲ್ಲಿ ಸಹಾಯಹಸ್ತವನ್ನು ನೀಡುತ್ತಾ ಬರುತ್ತಿರುವ ಪಡುಮಾನಾ೯ಡಿನ ಸಾಯಿ ಮಾನಾ೯ಡ್ ಸೇವಾ ಸಂಘವು ತನ್ನ 100ನೇ ಯೋಜನೆಯ ಸಂಭ್ರಮದಲ್ಲಿದ್ದು ಈ ಸಂದಭ೯ ಬಡ ಕುಟುಂಬದ ಮನೆಯೊಂದನ್ನು ಸಂಪೂಣ೯ ನವೀಕರಿಸಿ ಹಸ್ತಾಂತರಿಸಲಿದೆ.
ಕಳೆದ ಮೂರು ವರುಷಗಳ ಹಿಂದೆ ಸಾಯಿ ಮಾನಾ೯ಡ್ ಎಂಬ ಹೆಸರಿನ ತಂಡವೊಂಡು ಕ್ರಿಕೆಟ್ ಪಂದ್ಯಾಟವೊಂದನ್ನು ಆಯೋಜಿಸಿದ್ದು ಅದರಲ್ಲಿ ಉಳಿಕೆಯಾದ ಹಣವನ್ನು ಸೇವಾ ಕಾಯ೯ಗಳಿಗೆ ವಿನಿಯೋಗಿಸುವುದೆಂದು ತೀಮಾ೯ನಿಸಲಾಯಿತು. ಅದರಂತೆ 50 ಜನರು ಸೇರಿಕೊಂಡು 'ಸಾಯಿ ಮಾನಾ೯ಡ್ ಸೇವಾ ಸಂಘ' ಎಂಬ ಟ್ರಸ್ಟನ್ನು ಮಾಡಿಕೊಂಡು ಆ ಮೂಲಕ ಅಸಕ್ತ ಕುಟುಂಬಗಳಿಗೆ ಆಸರೆಯಾಗಲು ಹೊರಟು ಹಲವಾರು ಕುಟುಂಬಗಳ ಕಣ್ಣೀರೊರೆಸುವ ಕೆಲಸವನ್ನು ಕೈಗೊಂಡಿತು ಇದೀಗ ಈ ಸೇವಾ ಸಂಘವು 253 ಜನ ಸದಸ್ಯರನ್ನೊಳಗೊಂಡಿದ್ದು ಪ್ರತಿಯೊಬ್ಬರು ತಮ್ಮಿಂದಾದಷ್ಟು ಆಥಿ೯ಕ ನೆರವನ್ನು ನೀಡುತ್ತಿದ್ದು ಅದನ್ನು ಪ್ರತಿ ತಿಂಗಳು ಅನಾರೋಗ್ಯ ಪೀಡಿತರ ಚಿಕಿತ್ಸಾ ವೆಚ್ಚಕ್ಕೆ, ಶಿಕ್ಷಣ, ಹಾಗೂ ಸಮಾಜಮುಖಿ ಕಾಯ೯ಕ್ರಮಗಳಿಗೆ ಭರಿಸುತ್ತಿದೆ.
ತನ್ನ 50 ಯೋಜನೆಯ ಮೂಲಕ ಮಾನಾ೯ಡಿನಲ್ಲಿ ಬಡ ಕುಟುಂಬದ ಬಿದ್ದು ಹೋಗಲಿದ್ದ ಮನೆಯನ್ನು ನವೀಕರಿಸಿ ಹಸ್ತಾಂತರಿಸಿತು.ಇದೀಗ ತನ್ನ 100ನೇ ಸೇವಾ ಯೋಜನೆಯಲ್ಲಿ ಪಡುಮಾನಾ೯ಡಿನ ಮುರಗೋಳಿಯಲ್ಲಿ ಲಕ್ಷ್ಮೀ ಪೂಜಾರ್ತಿ ಅವರ ಮನೆಯನ್ನು ಎರಡೂವರೆ ಲಕ್ಷ ವೆಚ್ಚದಲ್ಲಿ ನವೀಕರಿಸುವ ಮೂಲಕ ಆ ಕುಟುಂಬಕ್ಕೆ ಆಸರೆಯಾಗಿ ನಿಂತಿದೆ.
ನ.1 ರಂದು "ಶ್ರೀ ಲಕ್ಷ್ಮಿ ನಿಲಯ" ಗ್ರಹ ಪ್ರವೇಶ:
ಟ್ರಸ್ಟ್‌ನ 100ನೇ ಸೇವಾ ಯೋಜನೆಯ ಸವಿನೆನಪಿಗಾಗಿ ನ. 1ರಂದು ಪಡು ಮಾರ್ನಾಡು ಗ್ರಾಮದ ಮುರಗೋಳಿ ಪರಿಸರದ ಲಕ್ಷ್ಮಿ ಪೂಜಾರ್ತಿಯವರ ನವೀಕರಿಸಲಾದ ಮನೆಯಲ್ಲಿ ಬೆಳಿಗ್ಗೆ 9.00ಗಂಟೆಗೆ ಗಣಹೋಮ ಹಾಗೂ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮ:
ಸ್ಥಳೀಯ ಪ್ರತಿಭಾವಂತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಗ್ಗೆ 10:00 ಗಂಟೆಗೆ ಆರಂಭವಾಗಲಿವೆ.
ಬೆಳಗ್ಗೆ 11:30 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ 5 ಬಡ ಕುಟುಂಬಗಳಿಗೆ ಸಹಾಯಧನ ವಿತರಿಸುವ ಕಾಯ೯ಕ್ರಮ ನಡೆಯಲಿದೆ.
