ಜಿಲ್ಲಾ ಮಟ್ಟದ 14 ಮತ್ತು 17 ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ಅಥ್ಲೆಟಿಕ್ಸ್ : ಆಳ್ವಾಸ್ 75 ಪದಕ, 15 ನೂತನ ಕೂಟ ದಾಖಲೆ
ಆದಿತ್ಯ, ಸುಭಾಷ್, ಅಮನ್, ತುಷಾರ್, ಮೇಘಾ, ಸಮೀಕ್ಷಾ, ಪೂರ್ವಿ, ಅನುಶ್ರೀ ಪಿ. ಎಸ್., ಸುಜಾತ ಹಾಗೂ ಮೋಕ್ಷಿತ್ ನೂತನ ಕೂಟ ದಾಖಲೆ ನಿರ್ಮಿಸಿದ ಸಾಧಕರಾಗಿದ್ದಾರೆ.
14 ವರ್ಷ ವಯೋಮಿತಿಯಲ್ಲಿ ಮೋಕ್ಷಿತ್, ಮಂಥನ್, ಪೌಡೇಶ್, ನಿಖಿಲ್, ಮಲ್ಲಿಕಾರ್ಜುನ್, ಅಭಿಜ್ಞಾ, ತನ್ಮಯ, ಮೀನಾಕ್ಷಿ, ಪ್ರೀತಿ, ಲಲಿತಾ ಹಾಗೂ ಸಿಂಚನಾ ವಿವಿಧ ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದಾರೆ.
17 ವರ್ಷ ವಯೋಮಿತಿಯಲ್ಲಿ ಆದಿತ್ಯ, ತುಷಾರ್, ಆದರ್ಶ್, ಸುಭಾಷ್, ಶ್ರೀಹರಿ, ಕುಶಾಂತ್, ನಿಖಿಲ್, ಅಮನ್, ಮಲ್ಲಪ್ಪ, ನಿಂಗಣ್ಣ, ಹರ್ಷದ್, ಚಕ್ರವರ್ತಿ, ಅನುಶ್ರೀ ಪಿ. ಎಸ್., ಮೇಘಾ, ಮಾಲಾ ಟಿ. ಆರ್., ಸವಿತಾ, ಪೂರ್ಣಿಮಾ, ಅಮೂಲ್ಯಾ, ಸುಜಾತ, ರಕ್ಷಿತಾ, ಅನನ್ಯ, ಜ್ಞಾನೇಶ್ವರಿ, ಸಮೀಕ್ಷಾ, ವಿಜಯಲಕ್ಷ್ಮಿ, ಅನುಶ್ರೀ ಎಂ., ಪೂರ್ವಿ, ಅಂಜುಶ್ರೀ ಹಾಗೂ ವೈಷ್ಣವಿ ಸಾಧನೆ ಮಾಡಿದ್ದಾರೆ.
14 ವರ್ಷ ವಯೋಮಿತಿಯ ಬಾಲಕರ ತಂಡ ಹಾಗೂ 17 ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ತಂಡ ಪ್ರಶಸ್ತಿಗಳನ್ನು ಆಳ್ವಾಸ್ ಪಡೆದುಕೊಂಡಿದೆ.
ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.