ಅ.20 ರಂದು ಶ್ರೀರಾಮುಲು ಮೂಡುಬಿದಿರೆಗೆ

ಅ.20 ರಂದು ಶ್ರೀರಾಮುಲು ಮೂಡುಬಿದಿರೆಗೆ

ಮೂಡುಬಿದಿರೆ: ಕನಾ೯ಟಕ ಸರಕಾರದ ಮಾಜಿ ಸಚಿವ ಶ್ರೀರಾಮುಲು ಅ.20 ರಂದು ಮೂಡುಬಿದಿರೆಗೆ ಆಗಮಿಸಲಿದ್ದಾರೆ. 

ಅವರು ಮೂಡುಬಿದಿರೆ ಸಮೀಪದ ಬನ್ನಡ್ಕ ಶ್ರೀ ಕ್ಷೇತ್ರ ಕಲಾಮಂದಿರದಲ್ಲಿ  ನಡೆಯುವ 5ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಅಂಗವಾಗಿ ಸಂಜೆ 4 ಗಂಟೆಗೆ ನಡೆಯುವ ಧಾಮಿ೯ಕ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಬಿಜೆಪಿಯ ಪ್ರಮುಖ ನಾಯಕರಾಗಿರುವ ಶ್ರೀರಾಮುಲು ಅವರು 2006ರಲ್ಲಿ ಪ್ರವಾಸೋದ್ಯಮ ಸಚಿವ, 2008ರಲ್ಲಿ ಆರೋಗ್ಯ ಸಚಿವರಾಗಿ ಹಾಗೂ 2021-23ರವರೆಗೆ ಬುಡಕಟ್ಟು ಕಲ್ಯಾಣದ ಸಚಿವರಾಗಿದ್ದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಚಿವರಾಗಿದ್ದ ಸಂದಭ೯ದಲ್ಲಿ '108' ಅಂಬುಲೆನ್ಸ್ ಸೇವೆಯನ್ನು ಆರಂಭಿಸಿ ಗಮನ ಸೆಳೆದಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article