ಕ್ವೋರಿಯಾ 2026: ವೈ.ಐ.ಟಿ. ಮೂಡುಬಿದಿರೆಯಲ್ಲಿ ಉದ್ಯಮ ಕ್ಷೇತ್ರದ ಗಣ್ಯರ ಶೃಂಗಸಭೆ
ಸಂಸ್ಥೆಯ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (AI & ML) ವಿಭಾಗವು ತನ್ನ ವಿದ್ಯಾರ್ಥಿ ವೇದಿಕೆಯಾದ ‘ಯೆನ್ ಆರ್ಟಿಫಿಷಿಯಾ’ (Yen Artificia) ಮೂಲಕ ಐಇಇಇ ವೈಐಟಿ ವಿದ್ಯಾರ್ಥಿ ಶಾಖೆ ಹಾಗೂ ಐಎಸ್ಟಿಇ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಮತ್ತು ಸಂಸ್ಥೆಯ ಇನ್ನೋವೇಶನ್ ಕೌನ್ಸಿಲ್ನ ಬೆಂಬಲದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿತ್ತು.
ವಿದ್ಯಾರ್ಥಿ ಇಬ್ತಿಸಾಮ್ ಅಹಮ್ಮದ್ ಅವರ ನಿರ್ವಹಣೆಯಲ್ಲಿ ನಡೆದ ಪ್ಯಾನಲ್ ಚರ್ಚೆಯಲ್ಲಿ ಐವರು ಉದ್ಯಮ ಮತ್ತು ಸಂಶೋಧನಾ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಅಕೋಲೇಡ್ ಟೆಕ್ ಸೊಲ್ಯೂಷನ್ಸ್ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರೀಶ್ ನೀರ್ಮಾರ್ಗ, ಡೇಟಾವೆಕ್ಸ್ ಎಐ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಕೊಟ್ಯಾನ್, ಆಫೆನ್ಸೊ ಅಕಾಡೆಮಿ ಮತ್ತು ಹ್ಯಾಕ್ವೇರ್ ಸೆಕ್ಯುರಿಟಿ ಸೊಲ್ಯೂಷನ್ಸ್ನ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಫರ್ಹಾನ್ ಬಿನ್ ಫಝಿಲ್, ಆಂಕೋಫೈಟೋಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಡಾ. ತೇಜಸ್ವಿನಿ ಕುಲಕರ್ಣಿ ಹಾಗೂ ‘ಭಾರತದ ಎಐ ಕಿಡ್’ ಎಂದೇ ಪ್ರಸಿದ್ಧರಾದ ಥಿಂಕ್ಕ್ರಾಫ್ಟ್ ಅಕಾಡೆಮಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ರೌಲ್ ಜಾನ್ ಅಜು ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ನಾಲ್ಕು ಸುತ್ತುಗಳಲ್ಲಿ ನಡೆದ ಈ ಚರ್ಚೆಯಲ್ಲಿ ಉದ್ಯಮ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಸ್ತುತ ಬಳಕೆ, ಎಐ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸುರಕ್ಷತೆ, ನವೀನ ಆಲೋಚನೆಗಳನ್ನು ಬೌದ್ಧಿಕ ಆಸ್ತಿಯಾಗಿ (Intellectual Property – IP) ಸಂರಕ್ಷಿಸುವ ವಿಧಾನಗಳು ಹಾಗೂ ಭವಿಷ್ಯದ ಪೀಳಿಗೆಯು ಕೈಗೊಳ್ಳಬೇಕಾದ ತಾಂತ್ರಿಕ ಆವಿಷ್ಕಾರಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಬಳಿಕ ವಿದ್ಯಾರ್ಥಿಗಳೊಂದಿಗೆ ಮುಕ್ತ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಚರ್ಚೆಯ ಅಂತ್ಯದಲ್ಲಿ ಎಲ್ಲಾ ಪ್ಯಾನಲಿಸ್ಟ್ಗಳನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಐಇಇಇ ದಿನಾಚರಣೆ 2026 ನ್ನು ಆಚರಿಸಲಾಯಿತು.
ರೌಲ್ ಜಾನ್ ಅಜು, ಡಾ. ತೇಜಸ್ವಿನಿ ಕುಲಕರ್ಣಿ ಹಾಗೂ ಶ್ರೀ ಫರ್ಹಾನ್ ಬಿನ್ ಫಝಿಲ್ ಅವರು ಮೂರು ಪ್ರತ್ಯೇಕ ಸಮಾನಾಂತರ ತಾಂತ್ರಿಕ ಉಪನ್ಯಾಸಗಳನ್ನು ನೀಡಿದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಗಣ್ಯರು, ಸಂಪನ್ಮೂಲ ವ್ಯಕ್ತಿಗಳು, ಸ್ವಯಂಸೇವಕರು ಹಾಗೂ ಪ್ರಾಯೋಜಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಒಟ್ಟು 320 ಮಂದಿ ಭಾಗವಹಿಸಿದ್ದರು.
