'ಸಿನಿಮಾಟಿಕ್ ವೆಡ್ಡಿಂಗ್ ವರ್ಕ್‌ಶಾಪ್ ಮತ್ತು ಗಿಂಬಲ್ ಮಾಸ್ಟರ್ ಕ್ಲಾಸ್' ತರಬೇತಿ ಕಾರ್ಯಾಗಾರ
Saturday, October 31, 2026
ಮೂಡುಬಿದಿರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (SKPA) ಮೂಡುಬಿದಿರೆ ವಲಯದ ವತಿಯಿಂದ ವಲಯದ ಸದಸ್ಯರಿಗಾಗಿ 'ಸಿನಿಮಾಟಿಕ್ ವೆಡ್ಡಿಂಗ್ ವರ್ಕ್‌ಶಾಪ್ ಮತ್ತು ಗಿಂಬಲ್ ಮಾಸ್ಟರ್ ಕ್ಲಾಸ್' ತರಬೇತಿ ಕಾರ್ಯಾಗಾರವು ಮಂಗಳವಾರ ಸಮಾಜ ಮಂದಿರದಲ್ಲಿ ಜರುಗಿತು.
ಕಾಸರಗೋಡಿನ ಖ್ಯಾತ ಛಾಯಾಗ್ರಾಹಕ ಹರ್ಷ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸಿನಿಮಾಟಿಕ್ ವಿವಾಹ ಛಾಯಾಗ್ರಹಣದ ಮೆಲುಕುಗಳು ಹಾಗೂ ಗಿಂಬಲ್ ಬಳಕೆಯ ಕುರಿತು ಪ್ರಾಯೋಗಿಕ ಹಾಗೂ ತಾಂತ್ರಿಕ ಮೌಲ್ಯಯುತ ಮಾಹಿತಿಯನ್ನು ನೀಡಿದರು.
ಮೂಡುಬಿದಿರೆ ವಲಯದ ಅಧ್ಯಕ್ಷ ನಿತಿನ್ ಬೆಳುವಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ "ಛಾಯಾಗ್ರಾಹಕರಲ್ಲಿ ವೃತ್ತಿ ಕೌಶಲ್ಯತೆಯನ್ನು ನಿರಂತರವಾಗಿ ಹೆಚ್ಚಿಸುವ ಉದ್ದೇಶದಿಂದ ಇಂತಹ ತರಬೇತಿ ಕಾರ್ಯಗಾರಗಳನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ" ಎಂದರು.
ವೇದಿಕೆಯಲ್ಲಿ ವಲಯದ ಪ್ರಧಾನ ಕಾರ್ಯದರ್ಶಿ ನಮಿತ್ ಬಂಗೇರ, ಉಪಾಧ್ಯಕ್ಷ ರಂಜಿತ್ ಕೋಟ್ಯಾನ್, ಛಾಯಾ ಕಾರ್ಯದರ್ಶಿ ಸತೀಶ್ ಎಂ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ ಕೋಟ್ಯಾನ್ ಉಪಸ್ಥಿತರಿದ್ದರು.
ಮೂಡುಬಿದಿರೆ ವಲಯದ ಸದಸ್ಯರು ಈ ಕಾರ್ಯಾಗಾರದಲ್ಲಿ ಉತ್ಸಾಹದಿಂದ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಂಡರು.
