ಮೂಡುಬಿದಿರೆ ಸಮಾಜ ಮಂದಿರದಲ್ಲಿ 79ನೇ ದಸರಾ ಸಂಭ್ರಮಕ್ಕೆ ಚಾಲನೆ: ಜನಪದ ತಜ್ಞ ಕೆ. ಗುಣಪಾಲ ಕಡಂಬರಿಗೆ 2026ರ ಸಮಾಜ ಮಂದಿರ ಪುರಸ್ಕಾರ ಪ್ರದಾನ
Sunday, October 11, 2026
ಮೂಡುಬಿದಿರೆ: ಸಮಾಜ ಮಂದಿರ ಸಭಾ (ರಿ.) ಮೂಡುಬಿದಿರೆ ವತಿಯಿಂದ ನಡೆಯುವ ಐದು ದಿನಗಳ ಉತ್ಸವ 79ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೂಡುಬಿದಿರೆ ದಸರಾ ಸಂಭ್ರಮಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಭಾನುವಾರ ಸಂಜೆ ಚಾಲನೆ ನೀಡಿದರು.
ನಂತರ ಮಾತನಾಡಿದ ಆಳ್ವ ಅವರು ಉತ್ಸವಗಳು ಉತ್ಸವಗಳು ನಮ್ಮ ಪೂವ೯ಜರು ನಮಗೆ ನೀಡಿದ ಬಳವಳಿ. ಮನೆಮನೆಗಳಲ್ಲಿ ಪೂಜೆಗೆ ಸೀಮಿತವಾಗಿದ್ದ ದಸರಾ ಈಗ ನಾಡಿನೆಲ್ಲೆಡೆ. ಕಾಲಕಾಲಕ್ಕೆ ವಿಜೃಂಭಿಸುತ್ತಿದೆ. ಇಂತಹ ಉತ್ಸವಗಳು ಸಾಮಾಜಿಕ ಸಾರಸ್ಯವನ್ನು ಕಾಪಾಡುವಲ್ಲಿ ಮಹತ್ತರ ಕೊಡುಗೆ ನೀಡಿದೆ.
ಜಾತಿ, ಧಮ೯ ಸಂಘಷ೯ ರಹಿತ ಮೂಡುಬಿದಿರೆ ನಿಮಾ೯ಣಕ್ಕೆ ಸಮಾಜ ಮಂದಿರದಲ್ಲಿ ನಡೆಯುತ್ತಿರುವ ದಸರಾ ಸಾಂಸ್ಕೃತಿಕ ಉತ್ಸವ ಇದಕ್ಕೆ ಪೂರಕವಾಗಿದೆ ಎಂದರು.
ಸಮಾಜ ಮಂದಿರ ಪುರಸ್ಕಾರ ಪ್ರದಾನ:
ವಿಶ್ರಾಂತ ಪ್ರಾಂಶುಪಾಲ, ಜಾನಪದ ತಜ್ಞ ಕೆ. ಗುಣಪಾಲ ಕಡಂಬ ಅವರಿಗೆ 2026ರ ಸಮಾಜ ಮಂದಿರ ಪುರಸ್ಕಾರ ಪ್ರದಾನ ಮಾಡಲಾಯಿತು.
ಆಳ್ವರಿಗೆ ಸನ್ಮಾನ:
75 ವಷ೯ ತುಂಬಿರುವ ಡಾ. ಎಂ. ಮೋಹನ ಆಳ್ವರನ್ನು ಸಮಾಜ ಮಂದಿರ ಸಭಾದಿಂದ ಸನ್ಮಾನಿಸಲಾಯಿತು.
ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜ ಮಂದಿರ ಸಭಾದ ಉಪಾಧ್ಯಕ್ಷ ಎಸ್.ಡಿ. ಸಾಮ್ರಾಜ್ಯ ಸಹಿತ ಸದಸ್ಯರು ಉಪಸ್ಥಿತರಿದ್ದರು.
ದಸರಾ ಸಾಹಿತ್ಯ ಸಂಭ್ರಮದ ಸಂಚಾಲಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಸ್ವಾಗತಿಸಿ, ಅತಿಥಿಗಳನ್ನು ಷರಿಚಯಿಸಿದರು. ಸಮಾಜ ಮಂದಿರ ಸಭಾದ ಪ್ರಧಾನ ಕಾಯ೯ದಶಿ೯ ಸುರೇಶ್ ಪ್ರಭು ಸನ್ಮಾನ ಪತ್ರ ವಾಚಿಸಿದರು. ಕಾಯ೯ದಶಿ೯ ಎಂ. ಗಣೇಶ್ ಕಾಮತ್ ಕಾಯ೯ಕ್ರಮ ನಿರೂಪಿಸಿದರು.
ಬಳಿಕ ಸವಿಗಾನ ಮೆಲೋಡಿಸ್ ಮೂಡುಬಿದಿರೆ ಇದರ ಸಂತೋಷ್ ಕುಮಾರ್ ಮತ್ತು ಬಳಗದವರಿಂದ ಸಂಗೀತ ರಸ ಮಂಜರಿ ನಡೆಯಿತು.

