ಮೂಡುಬಿದಿರೆಯಲ್ಲಿ ನವರಾತ್ರಿ ದಾಂಡಿಯ ನೃತ್ಯ ಕಾರ್ಯಕ್ರಮಕ್ಕೆ ಸಂಭ್ರಮದ ಚಾಲನೆ: ವಿವಿಧ ಸಮಾಜಗಳ ಅಧ್ಯಕ್ಷರಿಂದ ಸಾಮೂಹಿಕ ದೀಪ ಪ್ರಜ್ವಲನೆ
ನವರಾತ್ರಿಯ ಶುಭ ಸಂದರ್ಭದಲ್ಲಿ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ಸೌಹಾರ್ದತೆಯ ಸಂಕೇತವಾಗಿ ಆಯೋಜಿಸಲಾದ ಈ ದಾಂಡಿಯ ನೃತ್ಯ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಗೋಪಾಲಕೃಷ್ಣ ದೇವಸ್ಥಾನದ ಸ್ಮಿತಾ ಹೊಳ್ಳ, ತುಳುಕೂಟ ಬೆದ್ರದ ಪ್ರಧಾನ ಕಾರ್ಯದರ್ಶಿ ಚೇತನಾ ರಾಜೇಂದ್ರ ಹೆಗ್ಡೆ, ಬಿಲ್ಲವ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಜಿತೇಶ್, ದೇವಾಡಿಗರ ಸಂಘದ ಲಲಿತಾ ಎಸ್. ಮೊಯಿಲಿ, ರಾಮಕ್ಷತ್ರೀಯ ಮಹಿಳಾ ಸಂಘದ ಅಧ್ಯಕ್ಷೆ ರೇಖಾ ಕೋಟೆ, ಮರಾಠಿ ನಾಯ್ಕ್ ಸಂಘದ ಪ್ರಭಾ ಉಪಸ್ಥಿತರಿದ್ದರು.
ಶೋಭಾ ಎಸ್ ಹೆಗ್ಡೆ ಯವರು ಸ್ವಾಗತಿಸಿದರು ಕಾರ್ಯದರ್ಶಿ ಸಂಗೀತ ಧನ್ಯವಾದ ಧನ್ಯವಾದ ಮಾಡಿದರು ಉಪಾಧ್ಯಕ್ಷೆ ರೋಹಿಣಿ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ವಿವಿಧ ಸಮಾಜಗಳ ಮುಖಂಡರು ಒಂದೇ ವೇದಿಕೆಯಲ್ಲಿ ಸೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ವಿಶೇಷ ಆಕರ್ಷಣೆಯಾಗಿದ್ದು, ನವರಾತ್ರಿಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಇಂತಹ ಕಾರ್ಯಕ್ರಮಗಳು ಸಮಾಜಗಳ ನಡುವಿನ ಪರಸ್ಪರ ಬಾಂಧವ್ಯವನ್ನು ಬಲಪಡಿಸುವುದರ ಜೊತೆಗೆ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗುತ್ತವೆ.
