ಅಪಘಾತಕ್ಕೊಳಗಾಗಿರುವ ಈವ೯ರು ಹೆಣ್ಣು ಮಕ್ಕಳ ಚಿಕಿತ್ಸೆಗೆ ಸಾಯಿ ಮಾನಾ೯ಡು ಸೇವಾ ಸಂಘದಿಂದ ನೆರವು

ಅಪಘಾತಕ್ಕೊಳಗಾಗಿರುವ ಈವ೯ರು ಹೆಣ್ಣು ಮಕ್ಕಳ ಚಿಕಿತ್ಸೆಗೆ ಸಾಯಿ ಮಾನಾ೯ಡು ಸೇವಾ ಸಂಘದಿಂದ ನೆರವು


ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನ ಬೆಟ್ಟು, ಪಡುಮಾನಾ೯ಡು ಇದರ ಸೇವಾ ಯೋಜನೆ -99ರ ಅಂಗವಾಗಿ ಅಕ್ಟೋಬರ್ ತಿಂಗಳ 1ನೇ ಯೋಜನೆಯನ್ನು ಅಪಘಾತಕ್ಕೊಳಗಾಗಿರುವ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಕಾವ್ಯಶ್ರೀ ಮತ್ತು ಮನ್ವಿತಾ ಶ್ರೀ ಎಂಬವರ ಚಿಕಿತ್ಸೆಗೆ ಆಥಿ೯ಕ ನೆರವು ನೀಡಲಾಯಿತು.

ಮಾಣಿಲದ ಆನಂದ್ ಕುಲಾಲ್ ಎಂಬವರ ಇವ೯ರು ಪುತ್ರಿಯರಾದ ಕಾವ್ಯಶ್ರೀ, ಮನ್ವಿತಾಶ್ರೀ ಆ.19ರಂದು ದ್ವಿಚಕ್ರ ದಲ್ಲಿ ಪ್ರಯಾಣಿಸುತ್ತಿದ್ದ ಸಂಧರ್ಭ ದಲ್ಲಿ ವಿರುದ್ದ ದಿಕ್ಕಿನಲ್ಲಿ ಬಂದ ಪಿಕಪ್ ಡಿಕ್ಕಿಯಾಗಿ ಗಂಭೀರ ಗಾಯವಾಗಿ ಚಿಕಿತ್ಸೆಗೆ ಒಳಗಾಗಿದ್ದರು. ಇದಕ್ಕಾಗಿ ಇದುವರೆಗೆ ಸುಮಾರು 10ಲಕ್ಷ ದಷ್ಟು ಖರ್ಚು ಆಗಿರುತ್ತದೆ. 

ಆನಂದ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು ಅದರಲ್ಲಿ ಇಬ್ಬರು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಮನೆಯ ಪರಿಸ್ಥಿತಿ ತುಂಬಾ ಹದಗೆಟ್ಟಿದೆ ಇವರ ಅಸಹಾಯಕ ಪರಿಸ್ಥಿತಿಯನ್ನು ಕಂಡು  ನಮ್ಮ ಸೇವಾ ಸಂಘದಿಂದ 99ನೇ ಸೇವಾ ಯೋಜನೆ ಯ 10,000ರೂಪಾಯಿ ಚೆಕ್ಕನ್ನು ಅ.11ರಂದು ಹಸ್ತಾಂತರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article