ನಾಗರಕಟ್ಟೆ ಬಿದಿರು ಮನೆಯ ಜಗನ್ನಾಥ ಶೆಟ್ಟಿ ನಿಧನ

ನಾಗರಕಟ್ಟೆ ಬಿದಿರು ಮನೆಯ ಜಗನ್ನಾಥ ಶೆಟ್ಟಿ ನಿಧನ


ಮೂಡುಬಿದಿರೆ: ಕಳೆದ ಹಲವು ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ನಾಗರಕಟ್ಟೆ ಬಿದಿರುಮನೆಯ ಜಗನ್ನಾಥ ಶೆಟ್ಟಿ (70) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಗುರುವಾರ ನಿಧನ ಹೊಂದಿದರು. 

ಜಗ್ಗು ಶೆಟ್ಟಿ ಎಂದೇ ಖ್ಯಾತರಾಗಿದ್ದ ಅವರು ಕೆಲ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು.

ಅವರು ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಅವರೊಂದಿಗೆ ಹಾಗೂ ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್ ಅವರ ಆತ್ಮೀಯರಾಗಿ ಅವರ ಕಂಬಳ ತಂಡದಲ್ಲಿ ಸಹಕರಿಸುತ್ತಿದ್ದರು.

ಪತ್ರಿಕಾ ವಿತರಕ ಒಂಟಿಕಟ್ಟೆ ಪ್ರಭಾಕರ ಕುಲಾಲ್ ಸಹಿತ ಹಲವಾರು ಮಂದಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article