ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆ
ಮಂಗಳೂರು: ಗುರುವಾರ ಸಂಜೆ ವೇಳೆ ದ.ಕ ಜಿಲ್ಲೆಯ ಗ್ರಾಮೀಣ ಬಾಗದಲ್ಲಿ ಉತ್ತಮ ಮಳೆಯಾಗಿದೆ. ಕಡಬ, ಪುತ್ತೂರು, ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಸಂಜೆ ವೇಳೆ ಗಾಳಿ, ಗುಡುಗು ಸಹಿತ ಉತ್ತಮ ಮಳೆಯಾಗಿದ್ದು, ಮಂಗಳೂರು ನಗರದ ಸುತ್ತಮುತ್ತ ಸಾದಾರಣ ಮಳೆಯಾಗಿದೆ.
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅ.24ರ ತನಕ ಮಳೆ ಮುಂದುವರಿಯುವ ಲಕ್ಷಣಗಳಿವೆ. ಈಗಿನ ದಕ್ಷಿಣ ಕೇರಳ ಕರಾವಳಿಗೆ ತಲುಪಿರುವ ಗಾಳಿಯ ತಿರುವಿಕೆಯು ಉತ್ತರ ಭಾರತದ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಶುಷ್ಕ ಗಾಳಿ ಸೆಳೆಯಲ್ಪಡುವುದರಿಂದ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯ ಸಾಧ್ಯತೆಗಳು ಕಡಿಮೆ. ಅ.24ರಂದು ಬಂಗಾಳಕೊಲ್ಲಿಯಲ್ಲಿ ಉಂಟಾಗುವ ಗಾಳಿಯತಿರುವಿಕೆಯು ಅ.26ರ ಸುಮಾರಿಗೆ ಚಂಡಮಾರುತವಾಗಿ ಪರಿವರ್ತನೆಗೊಳ್ಳವ ಲಕ್ಷಣಗಳಿವೆ.
ಈ ಚಂಡಮಾರುತವು ಉತ್ತರಕ್ಕೆ ಚಲಿಸಿದರೆ ರಾಜ್ಯದ ಕರಾವಲಿ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆಗಳು ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.