ಪುತ್ತಿಗೆ ದೇವಳದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಟ್ಟೆಯ ಜೀರ್ಣೋದ್ಧಾರದ ನಿವೇದನಾ ಪತ್ರ ಬಿಡುಗಡೆ

ಪುತ್ತಿಗೆ ದೇವಳದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಟ್ಟೆಯ ಜೀರ್ಣೋದ್ಧಾರದ ನಿವೇದನಾ ಪತ್ರ ಬಿಡುಗಡೆ


ಮೂಡುಬಿದಿರೆ: ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಾಲಯದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಟ್ಟೆಯ ಜೀರ್ಣೋದ್ಧಾರದ ನಿವೇದನಾ ಪತ್ರದ  ಬಿಡುಗಡೆ ಸಮಾರಂಭವು ಭಾನುವಾರ ನಡೆಯಿತು.


ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಂಜಿತ್ ಪೂಜಾರಿ ತೋಡಾರ್ ಹಾಗೂ ಪುತ್ತಿಗೆ ದೇವಾಲಯದ ಆಡಳಿತ ಮುಖ್ಯಸ್ಥರಾದ ಕುಲದೀಪ್ ಎಂ ಅವರು ಜಂಟಿಯಾಗಿ ನಿವೇದನಾ ಪತ್ರವನ್ನು ಲೋಕಾರ್ಪಣೆಗೊಳಿಸಿದರು.

ಬಳಿಕ ಸಮಿತಿಯ ಅಧ್ಯಕ್ಷ ರಂಜಿತ್ ಪೂಜಾರಿ  ಹಾಗೂ ಪ್ರಮುಖ ಸದಸ್ಯರ ನೇತೃತ್ವದಲ್ಲಿ ಕಿರು ಸಭೆ ನಡೆಯಿತು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಕಟ್ಟೆಯ ಪುನರ್ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.

ಸಭೆಯಲ್ಲಿ  ಪ್ರಮುಖರಾದ ಅಭಿಲಾಷ್ ಶೆಟ್ಟಿ ಕಟೀಲು, ರಾಜೇಂದ್ರ ಕುಮಾರ್ ಜೈನ್, ಭರತ್ ಶೆಟ್ಟಿ ಹಡಿಂಜೆಗುತ್ತು, ಉದಯ ದೇವಾಡಿಗ ಕಾನ, ಶಶಿಧರ್ ಅಂಚನ್ ಎನಕ್ರಿಪಲ್ಲ, ಸುರೇಶ್ ದಾಸ್, ಉಮೇಶ್ ಆಚಾರ್ಯ, ಕುಮಾರ್ ಪ್ರಸಾದ್, ಜಗನ್ನಾಥ ಕಾನ, ಪಳಕಳ ಮಿತ್ರ ಮಂಡಳಿಯ ಅಧ್ಯಕ್ಷರಾದ ರವಿಶಂಕರ್ ಭಟ್, ಇಂಜಿನಿಯರ್ ಸತೀಶ್ ಭಟ್, ಶಿಲ್ಪಿ ಮಣಿಕಂಠ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಲಾಲ್  ಸ್ವಾಗತಿಸಿದರು. ಕೋಶಾಧಿಕಾರಿ ತೇಜಸ್ ದಾಸ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article