ಮೂಡುಬಿದಿರೆಯ ತೋಡಾರಿನಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದ ಬಸ್: ಸವಾರ ಸಾವು
Saturday, October 31, 2026
ಮೂಡುಬಿದಿರೆ: ಮಂಗಳೂರು-ಕಾಕ೯ಳ ರಾ. ಹೆದ್ದಾರಿ ಹಾದು ಹೋಗುವ ತೋಡಾರಿನಲ್ಲಿ ಶುಕ್ರವಾರ ಸಂಜೆ ಬಸ್ಸೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರ ವಾಹನದ ಸವಾರ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ನಡೆದಿದೆ.
ಮೂಡುಬಿದಿರೆಯ ಹಣ್ಣಿನ ಅಂಗಡಿಯಲ್ಲಿ ದುಡಿಯುತ್ತಿದ್ದ ತೋಡಾರಿನ ರಿಫಾಝ್ (19) ಮೃತಪಟ್ಟ ಯುವಕ.
ಅಭಿಮಾನ್ ಎಂಬ ಹೆಸರಿನ ಖಾಸಗಿ ಬಸ್ ಮಂಗಳೂರಿನಿಂದ ಮೂಡುಬಿದಿರೆಗೆ ಬರುತ್ತಿದ್ದಾಗ ಘಟನೆ ಸಂಭವಿಸಿದೆ.
ಸವೀ೯ಸ್ ರಸ್ತೆಯ ಮೂಲಕ ಬರಬೇಕಾಗಿದ್ದ ಬಸ್ ರಾಂಗ್ ಸೈಡ್‌ನಲ್ಲಿ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು ಈ ಸಂದಭ೯ ಸವಾರ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಬಸ್ಸಿನ ಚಾಲಕ ಮತ್ತು ನಿವಾ೯ಹಕ ತಪ್ಪಿಸಿಕೊಂಡಿದ್ದಾರೆ.
ಮೂಡುಬಿದಿರೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

