ನಮ್ಮ ಹಕ್ಕು ನಮಗೆ ನೀಡಿ: ಹೊಸಬೆಟ್ಟಿನಲ್ಲಿ ಬಿಜೆಪಿಯಿಂದ ಹಕ್ಕೋತ್ತಾಯ

ನಮ್ಮ ಹಕ್ಕು ನಮಗೆ ನೀಡಿ: ಹೊಸಬೆಟ್ಟಿನಲ್ಲಿ ಬಿಜೆಪಿಯಿಂದ ಹಕ್ಕೋತ್ತಾಯ


ಮೂಡುಬಿದಿರೆ: ಕಾಂಗ್ರೆಸ್ ಸರ್ಕಾರದ  ಸರ್ಕಾರದ ಧೋರಣೆಯನ್ನು ಖಂಡಿಸಿ, ನಮ್ಮ ಹಕ್ಕು ನಮಗೆ ನೀಡಿ ಎಂದು ಭಾರತೀಯ ಜನತಾ ಪಾರ್ಟಿಯ ಹೊಸಬೆಟ್ಟು ಶಕ್ತಿಕೇಂದ್ರದ ವತಿಯಿಂದ ಶುಕ್ರವಾರ ಹೊಸಬೆಟ್ಟು ಗ್ರಾ. ಪಂಚಾಯತ್ ಮುಂಭಾಗ ಪ್ರತಿಭಟನೆಯನ್ನು ನಡೆಸಲಾಯಿತು. 

ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರವು ಗ್ರಾಮ ಪಂಚಾಯತ್,ಸ್ಥಳೀಯ ಆಡಳಿತಕ್ಕೆ ಸೌಲಭ್ಯ ,ಅನುದಾನಗಳನ್ನು ನೀಡದೆ ಜನರನ್ನು ಅಲೆದಾಡುವಂತ ಪರಿಸ್ಥಿತಿ ನಿರ್ಮಾಣ ಮಾಡಿರುವುದನ್ನು ಖಂಡಿಸಿದರು.

ಈ ಸಂದರ್ಭದಲ್ಲಿ  ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನೀಲ್ ಆಳ್ವ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ, ಶೋಭೆಂದ್ರ ಸಸಿಹಿತ್ಲು, ಉಸ್ತುವಾರಿ ಈಶ್ವರ್ ಕಟೀಲ್,  ಪ್ರಧಾನಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು,  ಯುವಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಪುತ್ತಿಗೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ನಾಗೇಶ್ ಅಮೀನ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಶೆಟ್ಟಿ,  ಪಂಚಾಯತ್ ನ ಮಾಜಿ ಅಧ್ಯಕ್ಷ ವಲೇರಿಯನ್ ಕುಟಿನ್ಹ ಪಕ್ಷದ ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.

ಪಂಚಾಯತ್ ನ ಮಾಜಿ ಸದಸ್ಯ ಯೋಗೀಶ್ ಶೆಟ್ಟಿ ಪುಚ್ಚಮೊಗರು ಕಾಯ೯ಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article