ಸತ್ಯಾಸತ್ಯತೆಯನ್ನು ಪರಿಶೀಲಿಸುವ ವಿವೇಚನೆಯನ್ನು ವಿದ್ಯಾಥಿ೯ಗಳು ಬೆಳೆಸಿಕೊಳ್ಳಬೇಕು: ನಜ್ಮಾ ಫಾರೂಕಿ
ವಿದ್ಯಾರ್ಥಿಗಳು ಕೃತಕ ಬುದ್ದಿಮತ್ತೆಯ ಮೂಲಕ ದೊರೆಯುವ ಮಾಹಿತಿಯನ್ನು ವಿಮರ್ಶಿಸದೆ ಒಪ್ಪಿಕೊಳ್ಳಬಾರದು. ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ, ಅಧಿಕೃತ ಮೂಲಗಳೊಂದಿಗೆ ಹೋಲಿಕೆ ಮಾಡಿ, ಸರಿ–ತಪ್ಪುಗಳನ್ನು ವಿಶ್ಲೇಷಿಸುವ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಎಐಯನ್ನು ಜ್ಞಾನಾರ್ಜನೆಗೆ ಪೂರಕ ಸಾಧನವಾಗಿ ಬಳಸಬೇಕೇ ಹೊರತು, ಸ್ವಂತ ಆಲೋಚನೆ ಮತ್ತು ವಿವೇಚನೆಗೆ ಪರ್ಯಾಯವಾಗಿ ಪರಿಗಣಿಸಬಾರದು. ತಂತ್ರಜ್ಞಾನ ವೇಗವಾಗಿ ಮಾಹಿತಿಯನ್ನು ನೀಡಬಲ್ಲದು, ಆದರೆ ಆಳವಾದ ಜ್ಞಾನ ಮತ್ತು ಚಿಂತನೆಯ ಸಾಮರ್ಥ್ಯವನ್ನು ಬೆಳೆಸುವಲ್ಲಿ ಪುಸ್ತಕಗಳ ಪಾತ್ರ ಸದಾ ಮಹತ್ವದ್ದಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕಾನೂನು ವೃತ್ತಿಯಲ್ಲಿ ವೃತ್ತಿಪರ ನಡವಳಿಕೆ, ಶಿಸ್ತು, ಔಪಚಾರಿಕತೆ, ಉತ್ತಮ ಸಂವಹನ ಕೌಶಲ ಮತ್ತು ನೈತಿಕ ಮೌಲ್ಯಗಳು ಅತ್ಯಂತ ಮಹತ್ವದ್ದಾಗಿವೆ. ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳ ಉದ್ದೇಶ ಕೇವಲ ಪದವಿ ನೀಡುವುದಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ವೃತ್ತಿಪರ ಕೌಶಲ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವುದಾಗಿದೆ ಎಂದರು.
ನಂತರ ಎಸ್.ಡಿ.ಎಮ್ ಕಾನೂನು ಕಾಲೇಜಿನ ಡಾ. ಶಾರಿಕಾ ರೈ ಹಾಗೂ ವಿವೇಕಾನಂದ ಕಾನೂನು ಕಾಲೇಜಿನ ಡಾ ಬಿಕೆ ರವೀಂದ್ರ ವಿಶೇಷ ಉಪನ್ಯಾಸ ನಡೆಸಿದರು.
ಆಳ್ವಾಸ್ ಕಾನೂನು ಕಾಲೇಜಿನ ಪ್ರಾಚಾಯೆ೯ ಡಾ. ರಶ್ಮಿ ಶೆಟ್ಟಿ ಉಪಸ್ಥಿತರಿದ್ದರು.
ಸ್ತುತಿ ಎಸ್ ಚೌಟ ಸ್ವಾಗತಿಸಿದರು. ಉಪನ್ಯಾಸಕ ಡ್ಯಾರಿಲ್ ಕ್ಲೇತ್ ಕ್ವಾಡ್ರೋಸ್ ಕಾಯ೯ಕ್ರಮ ನಿರೂಪಿಸಿದರು, ಅಮೃತಾ ಜೆ ವಂದಿಸಿದರು.
