ರಂಗಭಾಷೆ ಮತ್ತು ಸೂಕ್ಷ್ಮಗಳನ್ನು ಅಥ೯ಮಾಡಿಕೊಳ್ಳದ ಪ್ರೇಕ್ಷಕರಿಂದ ಕಲಾಸ್ವಾದ ಅಸಾಧ್ಯ: ರಾಧಾಕೃಷ್ಣ ಕಲ್ಚಾರ್

ರಂಗಭಾಷೆ ಮತ್ತು ಸೂಕ್ಷ್ಮಗಳನ್ನು ಅಥ೯ಮಾಡಿಕೊಳ್ಳದ ಪ್ರೇಕ್ಷಕರಿಂದ ಕಲಾಸ್ವಾದ ಅಸಾಧ್ಯ: ರಾಧಾಕೃಷ್ಣ ಕಲ್ಚಾರ್

ವಿವಿಧ ಕ್ಷೇತ್ರದ ಸಾಧಕರಿಗೆ  ಸಮಾಜ ಮಂದಿರ ದಸರಾ ಗೌರವ


ಮೂಡುಬಿದಿರೆ: ಯಕ್ಷಗಾನ ಕಲೆಯ ಮೂಲ ಸೂತ್ರವಾಗಿರುವ ರಂಗ ಭಾಷೆ ಮತ್ತು ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳದ ಕಲಾವಿದ ಮತ್ತು ಪ್ರೇಕ್ಷಕರಿಂದ ಕಲಾಸ್ವಾದನೆ  ಅಸಾಧ್ಯ ಎಂದು ತಾಳಮದ್ದಳೆ ಅರ್ಥಧಾರಿ, ಲೇಖಕ ವಿಟ್ಲದ ರಾಧಾಕೃಷ್ಣ ಕಲ್ಚಾರ್ ಹೇಳಿದರು. 


ಅವರು ಗುರುವಾರ ಸಮಾಜ ಮಂದಿರ ಸಭಾದ 79ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು '' ಯಕ್ಷಗಾನ ಕಲಾಸ್ವಾದನೆ '' ಕುರಿತು ಉಪನ್ಯಾಸ ನೀಡಿದರು. 

ದೇವಿ ಮಹಾತ್ಮೆಯಂತಹದ ಪ್ರಸಂಗಗಳ ಪ್ರದರ್ಶನ ಇಂದು ಆಸ್ತಿಕರ ಶ್ರದ್ಧೆಯನ್ನೂ ಹೊಂದಿದ್ದು ಉಳಿದಂತೆ ಯಕ್ಷಗಾನ ಕಲೆಯಲ್ಲಿ ವ್ಯಾಪಾರೀಕರಣದ ನೆರಳು ಸಹಿತ ವಿಪರೀತಗಳು ಹೆಚ್ಚಿದಾಗ ಪರಂಪರೆಯ ಪ್ರೇಕ್ಷಕರು ಕಲೆಯಿಂದ ದೂರಾಗುವ ಆತಂಕವಿದೆ ಎಂದು ಅಭಿಪ್ರಾಯಪಟ್ಟರು.

ಮೂಡುಬಿದಿರೆಯ ನ್ಯಾಯವಾದಿ ಶರತ್ ಡಿ. ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ಕಾಶಿಯಾಗಿ ಬೆಳೆಯುತ್ತಿರುವ ಮೂಡುಬಿದಿರೆಯತ್ತ ಉದ್ಯೋಗಾವಕಾಶ ನೀಡುವ ಕಂಪೆನಿಗಳ  ಅವಕಾಶಗಳು ಹರಿದು ಬರಬೇಕಾಗಿದೆ. ಸಾಂಸ್ಕೃತಿಕವಾಗಿಯೂ ಬೆಳೆಯುತ್ತಿರುವ ಮೂಡುಬಿದಿರೆಯ ಪರಂಪರೆಯ ಪ್ರೀತಿ ಅನನ್ಯ ಎಂದವರು ಹೇಳಿದರು. 

ಸಮಾಜ ಮಂದಿರ ಗೌರವ:

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂಡುಬಿದಿರೆಯ ರಾಜಾರಾಮ್ ನಾಗರಕಟ್ಟೆ ( ಸಾಂಸ್ಕೃತಿಕ ) , ಡಾ. ಸರಸ್ವತಿ ಭಟ್  (ವೈದ್ಯಕೀಯ ಕ್ಷೇತ್ರ) , ಸತೀಶ್ ಬಂಗೇರ ( ಆರ್ಥಿಕ , ಸಾಮಾಜಿಕ ಸೇವೆ), ಶ್ರೀನಿವಾಸ ಕಿಣಿ ಅವರಿಗೆ (ಸಮಾಜ ಸೇವೆ ) ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಗಾಗಿ ಸಮಾಜ ಮಂದಿರ ಗೌರವ ನೀಡಲಾಯಿತು.

ಸಮಾಜ ಮಂದಿರ ಸಭಾದ ಉಪಾಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. 

ದಸರಾ ಉತ್ಸವ ಸಂಚಾಲಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಸ್ವಾಗತಿಸಿದರು. ಸಮ್ಮಾನಿತರ ಕುರಿತು ಅಭಿನಂದನಾ ಮಾತುಗಳನ್ನಾಡಿದ  ಜತೆ ಕಾರ್ಯದರ್ಶಿ, ದಸರಾ ಉತ್ಸವ ಸಂಚಾಲಕ ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಸಭಾ ಕಾರ್ಯಕ್ರಮದ ಬಳಿಕ ಟಾಪ್ ಎಂಟರ್ ಟೈನರ್ಸ್ ನ ರೂಪೇಶ್ ಕುಮಾರ್ ಅವರ ವಿದ್ಯಾರ್ಥಿಗಳಿಂದ  ನೃತ್ಯ ವೈವಿಧ್ಯ   ಕಾರ್ಯಕ್ರಮ ಜರಗಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article