ವಿಶೇಷ ವೇಷ ಧಾರಣೆ: ವಿಹಿಂಪ ಮತ್ತು ಬಜರಂಗದಳ ಕಲ್ಲಮುಂಡ್ಕೂರು ವತಿಯಿಂದ ಅಶಕ್ತ ಕುಟುಂಬಗಳಿಗೆ ನೆರವು

ವಿಶೇಷ ವೇಷ ಧಾರಣೆ: ವಿಹಿಂಪ ಮತ್ತು ಬಜರಂಗದಳ ಕಲ್ಲಮುಂಡ್ಕೂರು ವತಿಯಿಂದ ಅಶಕ್ತ ಕುಟುಂಬಗಳಿಗೆ ನೆರವು


ಮೂಡುಬಿದಿರೆ: ವಿಶ್ವ ಹಿಂದೂ ಪರಿಷತ್–ಬಜರಂಗದಳದ ಜೈ ಹನುಮಾನ್ ಘಟಕ, ಕಲ್ಲಮುಂಡ್ಕೂರು ವತಿಯಿಂದ ಕಲ್ಲಮುಂಡ್ಕೂರು ಗಣೇಶೋತ್ಸವದ ಸಂದರ್ಭದಲ್ಲಿ ವಿಶೇಷ ವೇಷಧಾರಣೆಯ ಮೂಲಕ ನಿಧಿ ಸಂಗ್ರಹಿಸಿ ಗ್ರಾಮದ ಅಶಕ್ತ ಕುಟುಂಬಗಳಿಗೆ ನೆರವು ನೀಡಲಾಯಿತು.


ಗ್ರಾಮಸ್ಥರು, ಪರವೂರಿನವರು ಹಾಗೂ ವಿದೇಶಗಳಲ್ಲಿ ನೆಲೆಸಿರುವ ಗ್ರಾಮದ ಬಂಧುಗಳು, ಸ್ನೇಹಿತರು ಮತ್ತು ಹಿತೈಷಿಗಳ ಸಹಕಾರದಿಂದ ಕೆಲವೇ ಗಂಟೆಗಳಲ್ಲಿ ಒಟ್ಟು ₹52,480 ಸಂಗ್ರಹಿಸಲಾಯಿತು.

ಈ ಮೊತ್ತದಲ್ಲಿ ₹30,000 ಅನ್ನು ಗ್ರಾಮದ ಇಬ್ಬರು ಕ್ಯಾನ್ಸರ್ ಪೀಡಿತರಿಗೆ ತಲಾ ₹15,000ರಂತೆ ಆರ್ಥಿಕ ಸಹಾಯವಾಗಿ ನೀಡಲಾಯಿತು. ಉಳಿದ ₹22,480ರಲ್ಲಿ ದಿನಸಿ ಕಿಟ್‌ಗಳನ್ನು ಖರೀದಿಸಿ ಆರು ಕುಟುಂಬಗಳಿಗೆ ವಿತರಿಸಲಾಯಿತು. ಇವುಗಳಲ್ಲಿ ಗ್ರಾಮದ ಎಸ್. ಟಿ ಸಮುದಾಯದ ಇಬ್ಬರಿಗೆ ನಲ್ಕೆಮಾರಿನ ಎಸ್. ಸಿ ಸಮುದಾಯದ ಈವ೯ರಿಗೆ ಹಾಗೂ ಕಳಸಬೈಲಿನ ಎರಡು ಕುಟುಂಬಗಳು ಸೇರಿವೆ.

ಇದಲ್ಲದೆ, ಮಕ್ಕಳ ಅನುಕೂಲಕ್ಕಾಗಿ ನಿಡ್ಡೋಡಿ ಅಂಗನವಾಡಿಗೆ ಐದು ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಮಾಜಮುಖಿ ಕಾರ್ಯದಲ್ಲಿ ವಿಶ್ವ ಹಿಂದೂ ಪರಿಷತ್–ಬಜರಂಗದಳದ ಕಾರ್ಯಕರ್ತರು ಹಾಗೂ ಓಂಕಾರ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ ಕ್ಲಬ್‌ನ ಸದಸ್ಯರು ಸಹಕರಿಸಿದರು.

ಆರ್ಥಿಕ ನೆರವು ನೀಡಿದ ಎಲ್ಲ ದಾನಿಗಳು, ಸ್ನೇಹಿತರು, ಹಿತೈಷಿಗಳು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸಿದವರಿಗೆ ಘಟಕ ಕೃತಜ್ಞತೆ ಸಲ್ಲಿಸಿದೆ. “ಸೇವೆಯೇ ಧರ್ಮ, ಮಾನವೀಯತೆಯೇ ನಮ್ಮ ಶಕ್ತಿ” ಎಂಬ ಧ್ಯೇಯದೊಂದಿಗೆ ಇಂತಹ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸುವ ಸಂಕಲ್ಪವನ್ನು ಘಟಕ ವ್ಯಕ್ತಪಡಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article