ಅಜು೯ನಾಪುರ ದೇವಸ್ಥಾನದಿಂದ ಅನಾರೋಗ್ಯದ ಪೀಡಿತರಿಗೆ ಅರೋಗ್ಯ ನಿಧಿ ವಿತರಣೆ

ಅಜು೯ನಾಪುರ ದೇವಸ್ಥಾನದಿಂದ ಅನಾರೋಗ್ಯದ ಪೀಡಿತರಿಗೆ ಅರೋಗ್ಯ ನಿಧಿ ವಿತರಣೆ


ಮೂಡುಬಿದಿರೆ: ಶ್ರೀ ಕ್ಷೇತ್ರ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಿರ್ತಾಡಿ- ವಾಲ್ಪಾಡಿ ಇದರ ವತಿಯಿಂದ ದಾನಿಗಳ ಸಹಕಾರದಿಂದ ಸುಮಾರು 22 ಮಂದಿ ತೀವ್ರ ಅನಾರೋಗ್ಯ ಪೀಡಿತರಿಗೆ ಎರಡುವರೆ ಲಕ್ಷದಷ್ಟು ಮೊತ್ತವನ್ನು ಅರೋಗ್ಯ ನಿಧಿಯಾಗಿ ವಿತರಿಸಲಾಯಿತು. 

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾದ ನಾರಾಯಣ ಶೆಟ್ಟಿ ಕೊಂಕೆ  ಅಧ್ಯಕ್ಷತೆಯನ್ನು  ವಹಿಸಿ ಮಾತನಾಡಿ ಇದುವ ದ್ವಿತೀಯ ವರ್ಷದ ಕಾರ್ಯಕ್ರಮ ತೃತೀಯ ವರ್ಷದಲ್ಲಿ ಸುಮಾರು ಐದು ಲಕ್ಷ ಅರೋಗ್ಯ ನಿಧಿಯನ್ನು ವಿತರಿಸುವ ಗುರಿ ಹೊಂದಿದೆ ಎಂದರು. 

ಮುಖ್ಯ ಅಥಿತಿಗಳಾಗಿ ರೋಹಿತ್ ಕುಮಾರ್ ಶೆಟ್ಟಿ ನಗ್ರಿಗುತ್ತು ಪೂಣೆ, ರುದ್ರಾಂಶ ಕನಸ್ಟ್ರಕ್ಷನ್ ನ ಮಾಲಕರಾದ ಅಜಯ್ ದೀಕ್ಚಿತ್ ಶೆಟ್ಟಿ,  ಸಿ.ಎ ಕರುಣಾಕರ ಶೆಟ್ಟಿ, ರುಕ್ಕಯ್ಯ ಪೂಜಾರಿ, ಅರುಣ್ ಕುಮಾರ್ ಶೆಟ್ಟಿ, ಸವಿತಾ ವಿಶ್ವನಾಥ ಉಪಸ್ಥಿತರಿದ್ದರು. 

ಉಪನ್ಯಾಸಕ ಸುದೀಪ್ ಬುನ್ನನ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article