ಬಪ್ಪನಾಡು: ಶ್ರೀ ಸಾಯಿಬಾಬ ಮಂದಿರದ 4ನೇ ವರ್ಷದ ವರ್ಧಂತಿ ಉತ್ಸವ ಸಂಪನ್ನ

ಬಪ್ಪನಾಡು: ಶ್ರೀ ಸಾಯಿಬಾಬ ಮಂದಿರದ 4ನೇ ವರ್ಷದ ವರ್ಧಂತಿ ಉತ್ಸವ ಸಂಪನ್ನ


ಮುಲ್ಕಿ: ಇಲ್ಲಿನ ಬಪ್ಪನಾಡು ವೆಂಕಟಗಿರಿ ಅಪಾರ್ಟ್ಮೆಂಟಿನ ಸಂಕೀರ್ಣದಲ್ಲಿ ಪ್ರತಿಷ್ಠಾಪನೆ ಗೊಂಡ ಶ್ರೀ ಸಾಯಿಬಾಬ ಮಂದಿರದ 4ನೇ ವರ್ಷದ ವರ್ಧಂತಿ ಮಹೋತ್ಸವವು ಆ.26 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೇ.ಮೂ. ಲಕ್ಷ್ಮೀ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಜರುಗಿತು.


ಅಂದು ಬೆಳಗ್ಗೆ 7.30ಕ್ಕೆ ಸದ್ಗುರು ಶ್ರೀ ಸಾಯಿಬಾಬರಿಗೆ ಅಭಿಷೇಕ ಪೂಜೆ , 9.00 ಗಂಟೆಗೆ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆ ನೆರವೇರಿತು. 11 ಗಂಟೆ ಯಿಂದ ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಮಮತಾ ಮತ್ತು ಬಳಗದವರಿಂದ ಕೊಳಲು ವಾದನ ಬಳಿಕ ಶ್ರೀ ದುರ್ಗಾ ಪರಮೇಶ್ವರಿ ಮಹಿಳಾ ಭಜನಾ ಮಂಡಳಿ ಬಪ್ಪನಾಡು ಇವರಿಂದ ಭಜನಾ ಕಾರ್ಯಕ್ರಮ ನೆರವೇರಿತು.


ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಸೇವಾಕರ್ತರಾದ ಅರುಣ್ ಎಸ್.ಶೆಟ್ಟಿ ಮತ್ತು ಸರಸ್ವತಿ ಶೆಟ್ಟಿ, ದಿನೇಶ್ ಹೆಗ್ಡೆ, ರಘುರಾಮ ಮಾಡ, ಚೇತನ್ ಜೆ. ಶೆಟ್ಟಿ. ಮಾನಂಪಾಡಿ ಗುತ್ತಿನಾರು ಭೋಜ  ಶೆಟ್ಟಿ , ಮೋಹನ್ ದಾಸ್ ಶೆಟ್ಟಿ, ಮಹಿಮಾ ಹೆಗ್ಗಡೆ , ಲತಾ ಆರ್.ಶೆಟ್ಟಿ, ಪ್ರೇಮ ಶೆಟ್ಟಿ, ಮನೋರಮ ಸುವರ್ಣ, ಆಶಾಲತ,  ರತ್ನಾಕರ ಶೆಟ್ಟಿ, ಶಂಕರ ಭಂಡಾರಿ ಹಾಗೂ ಸಾಯಿಬಾಬ ಮಂದಿರದ ಟ್ರಸ್ಟ್ ನ ಆಡಳಿತ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article