ರಾಮಕೃಷ್ಣ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ

ರಾಮಕೃಷ್ಣ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ


ಪುತ್ತೂರು: ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ 2026-27ನೇ ಸಾಲಿನ ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ರಚನೆ ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.   

ಅಧ್ಯಕ್ಷರಾಗಿ ಸೌಮ್ಯಶ್ರೀ ಅವರು ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಪ್ರತ್ಯೂಷ್, ಕಾರ್ಯದರ್ಶಿಯಾಗಿ ಶಶಿಕಲಾ, ಜತೆ ಕಾರ್ಯದರ್ಶಿಯಾಗಿ ಸುಜಿತ್ ರೈ ಹಾಗೂ ಕೋಶಾಧಿಕಾರಿಯಾಗಿ ಪ್ರೇಮ ಜಿ.ಪಿ ಅವರು ಆಯ್ಕೆಯಾದರು.  

ಕಾರ್ಯಕ್ರಮದ ವೇದಿಕೆಯಲ್ಲಿ ಶಾಲೆಯ ಮುಖ್ಯ ಗುರುಗಳಾದ ಗಾಯತ್ರಿ ಎಸ್, ವಿಶ್ರಾಂತ ಶಿಕ್ಷಕರುಗಳಾದ  ಎನ್ ಮನೋಹರ ರೈ, ವಸಂತಿ. ಕೆ, ರೂಪಕಲಾ ಕೆ, ಮಾಲತಿ, ಜಯಲಕ್ಷ್ಮಿ ಎ, ಶಿಕ್ಷಕಿ ಸಂಧ್ಯಾ.ಕೆ  ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾಗರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರೀಷ್ಮಾ ಅವರು ಸ್ವಾಗತಿಸಿ, ಶಶಿಕಲಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article