ತೆಂಗಿನಕಾಯಿ ಸಾಗಾಟದ ವಾಹನ ಪಲ್ಟಿ: ಉಪ್ಪಿನಂಗಡಿ ಸಿಎಸ್ ಟ್ರೇಡರ‍್ಸ್ ಮಾಲಕ ಶಿವಪ್ರಸಾದ್ ಮೃತ್ಯು

ತೆಂಗಿನಕಾಯಿ ಸಾಗಾಟದ ವಾಹನ ಪಲ್ಟಿ: ಉಪ್ಪಿನಂಗಡಿ ಸಿಎಸ್ ಟ್ರೇಡರ‍್ಸ್ ಮಾಲಕ ಶಿವಪ್ರಸಾದ್ ಮೃತ್ಯು


ಪುತ್ತೂರು: ಉಪ್ಪಿನಂಗಡಿಯ ತೆಂಗಿನ ಕಾಯಿ ಮಾರಾಟ ವ್ಯವಹಾರ ನಡೆಸುತ್ತಿದ್ದ ವ್ಯಾಪಾರಿಯೊಬ್ಬರು ಪುತ್ತೂರಿಗೆ ತೆಂಗಿನಕಾಯಿ ಸಾಗಾಟದ ಸಂದರ್ಭ ಪಿಕಪ್ ವಾಹನ ಪಲ್ಟಿಯಾಗಿ ಮೃತಪಟ್ಟ ಘಟನೆ ಪುತ್ತೂರಿನ ಕೋಡಿಂಬಾಡಿ ಎಂಬಲ್ಲಿ ನಡೆದಿದೆ. 

ಉಪ್ಪಿನಂಗಡಿಯ ಸಿ.ಎಸ್ ಟ್ರೇಡರ‍್ಸ್ ಮಾಲಕ ಶಿವಪ್ರಸಾದ್ (50) ದುರ್ಘಟನೆಯಲ್ಲಿ ಮೃತಪಟ್ಟವರು. ಉಪ್ಪಿನಂಗಡಿಯಿಂದ ಸೇಡಿಯಾಪು ಕೋಕನೆಟ್ ಇಂಡಸ್ಟ್ರೀಸ್ ಎಂಬಲ್ಲಿಗೆ ತೆಂಗಿನಕಾಯಿ ಸಾಗಾಟದ ಸಂದರ್ಭ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಅರ್ಬಿ ಎಂಬಲ್ಲಿ ವಾಹನ ಆಕಸ್ಮಿಕವಾಗಿ ಪಲ್ಟಿಯಾಗಿದೆ. ಈ ಸಮಯದಲ್ಲಿ ವಾಹನದಿಂದ ಜಿಗಿದ ಶಿವಪ್ರಸಾದ್ ಅವರ ಮೇಲೆ ತೆಂಗಿನಕಾಯಿ ತುಂಬಿದ್ದ ವಾಹನ ಬಿದ್ದು ಅವರು ಮೃತಪಟ್ಟಿದ್ದಾರೆ. 

ಶಿವಪ್ರಸಾದ್ ಅವರು ಮೂಲತಾ ಬಜತ್ತೂರು ಗ್ರಾಮದ ಮಂಜಿಪಲ್ಲ ಎಂಬಲ್ಲಿನ ನಿವಾಸಿಯಾಗಿದ್ದು, ಉಪ್ಪಿನಂಗಡಿ ಅಶ್ವಿನಿ ಇಲೆಕ್ಟ್ರಾನಿಕ್ಸ್ ಅಂಗಡಿ ಹಲವು ವರ್ಷ ಕೆಲಸ ಮಾಡಿದ್ದರು. ಬಳಿಕ ಉಪ್ಪಿನಂಗಡಿಯಲ್ಲಿ ತಮ್ಮ ತೆಂಗಿನಕಾಯಿ ಮಾರಾಟ ಉದ್ಯಮವನ್ನು ಪ್ರಾರಂಭಿಸಿದ್ದರು. ಪಂಜಿಪಲ್ಲದ ತಮ್ಮ ಜಮೀನು ಮಾರಾಟ ಮಾಡಿ ಕೆಲ ವರ್ಷಗಳ ಹಿಂದೆಯೇ ಪುತ್ತೂರಿನ ಬನ್ನೂರಿನಲ್ಲಿ ವಾಸ್ತವ್ಯ ಹೊಂದಿದ್ದರು. ಅವರ ಪತ್ನಿ ಯಶೋಧಾ ಕಬಕ ಪ್ರೌಢಶಾಲಾ ಶಿಕ್ಷಕಿಯಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article