ಕುಕ್ಕೆಗೆ ಆಗಮಿಸಿದ ವನ್ಯಜೀವಿ ಸಂರಕ್ಷಣಾ ಜಾಗೃತಿ ಜಾಥಾ
Tuesday, October 6, 2026
ಸುಬ್ರಹ್ಮಣ್ಯ: ರಾಷ್ಟ್ರೀಯ 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಪಂಜ ಅರಣ್ಯ ಇಲಾಖೆ ವತಿಯಿಂದ ವನ್ಯಜೀವಿ ಸಂರಕ್ಷಣಾ ಜಾಗೃತಿ ಜಾಥವನ್ನು ಸೋಮವಾರದಿಂದ ಕೈಗೊಳ್ಳಲಾಯಿತು.
ಪಂಜ ವಲಯ ಅರಣ್ಯ ಅಧಿಕಾರಿ ಸಂಧ್ಯ ಅವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳು, ಫಾರೆಸ್ಟ್ ಗಾರ್ಡ್ ಹಾಗೂ ವಾಚರ್‌ಗಳನ್ನು ಒಳಗೊಂಡ ಸುಮಾರು 30ಕ್ಕೂ ಮಿಕ್ಕಿ ಅಧಿಕಾರಿ, ಸಿಬ್ಬಂದಿಗಳು ಜಾಥದಲ್ಲಿ ಪಾಲ್ಗೊಂಡರು. ಪಂಜದಿಂದ ಜೀಪ್ ಹಾಗೂ ಬೈಕುಗಳಲ್ಲಿ ಆರಂಭವಾದ ಜಾಥ ಏನಕ್ಕಲ್, ಸುಬ್ರಹ್ಮಣ್ಯ, ಗುತ್ತಿಗಾರು, ದೊಡ್ಡ ತೋಟ, ಅಯ್ಯನ ಕಟ್ಟೆ, ಕುಂತೂರು, ನೆಲ್ಯಾಡಿ, ಕಡಬ ಮಾರ್ಗವಾಗಿ ಪಂಜ ತಲುಪಲಿರುವುದಾಗಿ ತಿಳಿದುಬಂದಿದೆ.
ಜಾಥಾದಲ್ಲಿ ದಾರಿ ಯುದ್ಧಕ್ಕೂ ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಂಥ ಘೋಷಣೆಗಳನ್ನ ಹಾಗೂ ಉದ್ಘೋಷಗಳನ್ನ ಮಾಡಿರುತ್ತಾರೆ.
