ಕೃಷಿ ಸಚಿವ ನರೇಂದ್ರಸ್ವಾಮಿ ಕುಕ್ಕೆ ಸುಬ್ರಮಣ್ಯ ಭೇಟಿ
Saturday, October 24, 2026
ಸುಬ್ರಹ್ಮಣ್ಯ: ರಾಜ್ಯ ಕೃಷಿ ಸಚಿವ ಪಿಎಮ್ ನರೇಂದ್ರಸ್ವಾಮಿ ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿದರು. ಶುಕ್ರವಾರ ಮುಂಜಾನೆ ಆಶ್ಲೇಷ ಬಲಿ ಸೇವೆಯನ್ನು ಸಲ್ಲಿಸಿ ತದನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪಂಚಾಮೃತ ಮಹಾಭಿಷೇಕ ನೆರವೇರಿಸಿದರು.
ಶ್ರೀ ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತಾಯ ಅವರು ಸಚಿವರನ್ನ ಪ್ರಸಾದ ನೀಡಿ ಶಾಲು ಹೊಂದಿಸಿ ಗೌರವಿಸಿದರು.ತದನಂತರ ಹೊಸಳ್ಳಿಗಮ್ಮ ದೈವಸ್ಥಾನದಲ್ಲಿ ದರ್ಶನ ಪಡೆದು ಕುಕ್ಕೆಯಿಂದ ನಿರ್ಗಮಿಸಿದರು.