ಕಾರು ಅಪಘಾತ: ಶಾಸಕಿ ಪಾರು

ಕಾರು ಅಪಘಾತ: ಶಾಸಕಿ ಪಾರು


ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಸುಳ್ಯದ ಕರಿಕ್ಕಳ-ನಿಂತಿಕಲ್ ಮಧ್ಯೆಯ ಮುಚ್ಚಿಲ ಎಂಬಲ್ಲಿ ಇಂದು ಸಂಭವಿಸಿದೆ.   

ಎದುರಿನಿಂದ ತೆರಳುತ್ತಿದ್ದ ಕಾರು ದಿಢೀರನೆ ಬ್ರೇಕ್ ಹಾಕಿದ ಪರಿಣಾಮ, ಹಿಂಬದಿಯಿಂದ ಬರುತ್ತಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿದ್ದ ಇನ್ನೋವಾ ಕಾರು ಢಿಕ್ಕಿಯಾದ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಶಾಸಕರ ಕಾರಿನ ಮುಂಭಾಗ  ನಜ್ಜುಗುಜ್ಜಾಗಿದೆ. ಅಪಘಾತ ಸಂಭವಿಸಿದ ವೇಳೆ ಕಾರಿನಲ್ಲಿದ್ದ ಶಾಸಕಿ ಹಾಗೂ ಚಾಲಕ ಯಾವುದೇ ಗಾಯಗಳಿಲ್ಲದೆ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಘಟನೆಯ ಬಳಿಕ ಶಾಸಕಿ ಬೇರೊಂದು ವಾಹನದಲ್ಲಿ ತಮ್ಮ ನಿವಾಸಕ್ಕೆ ಪ್ರಯಾಣ ಬೆಳೆಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article