ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ಯಾನ್ಸರ್, ಆರೋಗ್ಯ ತಪಾಸಣಾ ಉಚಿತ ಶಿಬಿರ

ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ಯಾನ್ಸರ್, ಆರೋಗ್ಯ ತಪಾಸಣಾ ಉಚಿತ ಶಿಬಿರ


ಮೂಡುಬಿದಿರೆ: ಇಲ್ಲಿನ ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ  ಜ್ಞಾನ ವಿಕಾಸ ಕಾರ್ಯಕ್ರಮದಡಿ ಉಚಿತ ಕ್ಯಾನ್ಸರ್ ಹಾಗೂ ಆರೋಗ್ಯ ತಪಾಸಣಾ ಶಿಬಿರ ಕಲ್ಲಮುಂಡ್ಕೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆಯಿತು.


ಶ್ರೀಕ್ಷೇತ್ರ ದೈಲಬೆಟ್ಟುವಿನ ಮೊಕ್ತೇಸರ ಜಯಪ್ರಕಾಶ್ ಪಡಿವಾಳ್ ಮತ್ತು ಜಯಶ್ರೀ ಅಮರನಾಥ ಶೆಟ್ಟಿ ಶಿಬಿರಕ್ಕೆ ಚಾಲನೆ ನೀಡಿದರು.

ಟ್ರಸ್ಟ್ ಅಧ್ಯಕ್ಷೆ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಟ್ರಸ್ಟ್ ಮುಖಾಂತರ ಈಗಾಗಲೇ ಕ್ಯಾನ್ಸರ್, ದಂತ ಚಿಕಿತ್ಸೆ ಶಿಬಿರವನ್ನು ನಿರಂತರವಾಗಿ ಆಯೋಜಿಸುತ್ತಿದ್ದೇವೆ.ವಿವಿಧ ವೈದ್ಯಕೀಯ ಸಂಸ್ಥೆಗಳ ತಜ್ಞ ವೈದ್ಯರಿಂದ ಗುಣಮಟ್ಟದ ತಪಾಸಣೆ ನಡೆಯುವುದರಿಂದ ಕಲ್ಲಮುಂಡ್ಕೂರುನಂತಹ ನಂತಹ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಉಪಯುಕ್ತವಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಮೂಡುಬಿದಿರೆ ತಾಲೂಕು ಯೋಜನಾಧಿಕಾರಿಧನಂಜಯ್, ಫಾದರ್ ಮುಲ್ಲರ್ ನರ್ಸಿಂಗ್ ವಿಭಾಗದ ಡಾ. ಭಾಗ್ಯಶ್ರೀ, ಡಾ.ಎಸ್.ವಿ. ಅಭಿರಾಮ್, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಡಾ. ರಂಜನ್, ಶಾಂತರಾಮ್ ಭಟ್, ಒಕ್ಕೂಟದ ಅಧ್ಯಕ್ಷ ಭೋಜ ಸುವರ್ಣ, ಓಂಕಾರ್ ಗೇಮ್ಸ್ ಕ್ಲಬ್ ಯಶೋಧರ್ ಭಟ್, ಎಸ್.ಡಿ. ಎಂ.ಸಿ ಅಧ್ಯಕ್ಷ ವಸಂತ ನಾಯ್ಕ್, ಕಲ್ಲಮುಂಡ್ಕೂರು ಫ್ರೆಂಡ್ಸ್ ಸರ್ಕಲಿನ ಮೇಘನಾಥ್, ವಲಯ ಮೇಲ್ವಿಚಾರಕ ಶ್ರೀನಿವಾಸ್,  ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿನುತಾ ಉಪಸ್ಥಿತರಿದ್ದರು.

ಮಹಿಳೆಯರಿಗೆ ಗರ್ಭಕೋಶದ ಕ್ಯಾನ್ಸರ್ ಹಾಗೂ ಸ್ತನದ ಕ್ಯಾನ್ಸರ್, ಪುರುಷರಿಗೆ ಬಾಯಿಯ ಕ್ಯಾನ್ಸರ್ ತಪಾಸಣೆ ನಡೆಸಲಾಯಿತು. ಸಾರ್ವಜನಿಕರಿಗೆ ಇಸಿಜಿ, ಬಿಪಿ, ಶುಗರ್ ಹಾಗೂ ಕಿವಿ ತಪಾಸಣೆಯನ್ನೂ ನಡೆಸಲಾಯಿತು. ಒಟ್ಟು 100 ಮಂದಿ ಸದಸ್ಯರು ಶಿಬಿರದ ಪ್ರಯೋಜನ ಪಡೆದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article