ಮತಗಳ್ಳತನ: ಐಯುಎಮ್‌ಎಲ್ ವತಿಯಿಂದ ಪ್ರತಿಭಟನೆ

ಮತಗಳ್ಳತನ: ಐಯುಎಮ್‌ಎಲ್ ವತಿಯಿಂದ ಪ್ರತಿಭಟನೆ


ಉಳ್ಳಾಲ: ಮತ ಕಳ್ಳತನಕ್ಕೆ ಕಾರಣರಾದ ಚುನಾವಣಾ ಅಧಿಕಾರಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮುಸ್ಲಿಂ ಯೂತ್ ಲೀಗ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ರಾಷ್ಟ್ರೀಯ ಯುವ ಪ್ರತಿಭಟನೆ ಕೆಸಿರೋಡ್ ಜಂಕ್ಷನ್‌ನಲ್ಲಿ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಂಙಳ್, ಪ್ರಜಾಪ್ರಭುತ್ವ ಜನರದ್ದಾಗಿದ್ದು, ಜನರಿಗೆ ಪ್ರಜಾಪ್ರಭುತ್ವ ದಲ್ಲಿ ಬದುಕಲು ಅವಕಾಶ ಇರಬೇಕು. ಮತಕಳ್ಳತನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗತ್ತಲೆಯಲ್ಲಿ ಇಡುವುದು ಖಂಡನೀಯ. ಇದಕ್ಕೆ ಕಾರಣರಾದ ಚುನಾವಣಾ ಅಧಿಕಾರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಲಾಮ್ ಉಚ್ಚಿಲ ಮಾತನಾಡಿ, ನಮ್ಮ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಕೆಲಸ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ನಡೆಯುವುದು ಖಂಡನೀಯ ಎಂದರು.

ಐಯುಎಮ್‌ಎಲ್ ಜಿಲ್ಲಾ ಅಧ್ಯಕ್ಷ ಅಬ್ದುಲ್ ರಹ್ಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಮುಸ್ಲಿಂ ಯೂತ್ ಲೀಗ್ ಸದಸ್ಯ ಮಹಮ್ಮದ್ ಅಲಿ ಬಾಬು, ರಾಜ್ಯ ಕಾರ್ಯದರ್ಶಿ ನೌಶಾದ್ ಮಲಾರ್ ಉಪಾಧ್ಯಕ್ಷ ಶಬೀರ್ ತಲಪಾಡಿ, ಜಿಲ್ಲಾ ಅಧ್ಯಕ್ಷ ಹನೀಫ್, ಜಿಲ್ಲಾ ಮುಖಂಡ ಹಿದಾಯತ್ ಮಾರಿಪಳ್ಳ ಸಲಾಮ್ ಉಚ್ಚಿಲ, ಶೇಖ್ ಮುಹಮ್ಮದ್ ತಲಪಾಡಿ, ಅಬೂಬಕ್ಕರ್, ಕೋಶಾಧಿಕಾರಿ ರಿಯಾಝ್ ಹರೇಕಳ, ಶಮೀರ್  ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article