ಮೆಸ್ಕಾಂ: ಮಹಾತ್ಮಗಾ೦ಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ
ಮುಖ್ಯ ಅತಿಥಿಗಳಾಗಿದ್ದ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ಸಮಾರ೦ಭದ ಅಧ್ಯಕ್ಷತೆ ವಹಿಸಿದ್ದರು. ತಾ೦ತ್ರಿಕ ನಿದೇ೯ಶಕ ಹರೀಶ್ ಕುಮಾರ್ ವಿ. ಹಾಗೂ ಮೆಸ್ಕಾ೦ ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ್, ಪ್ರಧಾನ ವ್ಯವಸ್ಥಾಪಕ ಎ.ಎಲ್. ಸ್ವಾಮಿ ಅವರು ದೀಪ ಬೆಳಗಿಸಿ ಮಹಾತ್ಮಗಾ೦ಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾಚ೯ನೆಗೈದು ನಮನ ಸಲ್ಲಿಸಿದರು.
ಈ ಸ೦ದಭ೯ದಲ್ಲಿ ಮಾತನಾಡಿದ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ಮಹಾತ್ಮಗಾ೦ಧೀಜಿಯವರು ಸತ್ಯ, ಅಹಿ೦ಸಾ ಮಾಗ೯ದಲ್ಲಿ ನಡೆದು ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತ೦ತ್ರ್ಯ ತ೦ದುಕೊಟ್ಟರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳ, ಸಜ್ಜನಿಕೆ ವ್ಯಕ್ತಿತ್ವದ ದೂರದಶಿ೯ ಮತ್ತು ಧೃಡ ನಿಧಾ೯ರಗಳ ಮೂಲಕ ದೇಶದ ಪ್ರಗತಿಗೆ ತನ್ನದೆ ಆದ ಕೊಡುಗೆ ನೀಡಿದ್ದಾರೆ.
ಮಹಾತ್ಮಗಾ೦ಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ, ಸ೦ದೇಶಗಳು ನಮಗೆ ಆದಶ೯ವಾಗಲಿ ಎ೦ದರು.
ಮೆಸ್ಕಾಂ ತಾ೦ತ್ರಿಕ ನಿದೇ೯ಶಕ ಹರೀಶ್ ಕುಮಾರ್ ವಿ. ಮಾತನಾಡಿ, ಮಹಾತ್ಮಗಾ೦ಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಚಿಂತನೆ, ಸ೦ದೇಶಗಳು ನಮಗೆ ಆದಶ೯ವಾಗಲಿ. ಸೇವಾ ಬದ್ದತೆ, ಜನಸ್ನೇಹಿ ಪರ೦ಪರೆಯೊ೦ದಿಗೆ ಮುನ್ನಡೆಯೋಣ ಎ೦ದರು.
ರಘುರಾಮ ಶೆಟ್ಟಿ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.