ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ಅಹೋರಾತ್ರಿ ಧರಣಿ
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಗಟ್ಟಿ ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿ, ಕೋಟ್ಯಂತರ ಮತದಾರರನ್ನು ಮತದಾರರ ಪಟ್ಟಿ ಯಿಂದ ಅಳಿಸುವ ಕಾರ್ಯಕ್ಕೆ ಚುನಾವಣಾ ಆಯೋಗ ಕೈ ಹಾಕಿದೆ.ಪದ್ಮಶ್ರೀ ಪುರಸ್ಕೃತ ಹಾಜಬ್ಬರಿಗೆ ನೋಟೀಸು ಮಾಡುವ ಸ್ಥಿತಿ ಬಂದರೆ ,ದೇಶದ ಯಾರನ್ನೂ ಬಿಡಲಾರರು ಎಂಬ ಸ್ಥಿತಿ ಒದಗಿದೆ.ಇಡೀ ದೇಶದ ಪ್ರಜೆಗಳಿಗಾಗಿ ಮಾಡುತ್ತಿರುವ ಪ್ರತಿಭಟನೆ ಇದಾಗಿದೆ.ಚುನಾವಣಾ ಜ್ನಾನೇಶ್ ಕುಮಾರ್ ಅವರು ರಾಜೀನಾಮೆ ಕೊಡಲೇ ನೀಡಬೇಕು ಎಂದು ಆಗ್ರಹಿಸಿದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ಎಸ್ ಐಆರ್ ಜಾರಿ ಮಾಡಿ ಮತದಾನ ಕಸಿಯಲು ಶುರು ಮಾಡಿದೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ಮುಡಿಪು ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಕಾಜವ, ಮಮತಾ ಗಟ್ಟಿ,ಮನ್ಸೂರ್ ಮಂಚಿಲ, ರಝಿಯಾ ಇಬ್ರಾಹಿಂ,ಮುಸ್ತಫಾ ಹರೇಕಳ, ಫಿರೋಝ್ ಮಲಾರ್ ಬಾಜಿಲ್ ಡಿಸೋಜ, ನಾಸೀರ್ ಅಹ್ಮದ್ ಸಾಮಣಿಗೆ,ವಿವೇಕಾನಂದ ಎಸ್ ಸನಿಲ್, ರಝಾಕ್ ಕುಕ್ಕಾಜೆ,ಅಬ್ದುಲ್ ಸಲಾಮ್ ಉಚ್ಚಿಲ,ರಫೀಕ್ ಅಂಬ್ಲಮೊಗರು, ಆಸೀಫ್ ಸಾಮಣಿಗೆ,ನವಾಝ್ ನರಿಂಗಾನ, ಪ್ರಕಾಶ್ ಪಿಂಟೋ, ರವೂಫ್ ದೇರಳಕಟ್ಟೆ, ರಹ್ಮಾನ್ ಮುಡಿಪು, ಸತ್ತಾರ್ ಕೆಸಿರೋಡ್, ಸಮೀರ್ ಪಜೀರ್, ಪವನ್ ರಾಜ್, ಸೈಫುಲ್ಲಾ ಸೋಮೇಶ್ವರ, ಇಕ್ಬಾಲ್ ಎಚ್ ಆರ್,ದೇರಳಕಟ್ಟೆ, ಜಬ್ಬಾರ್ ಬೋಳಿಯಾರ್, ಯೂಸುಫ್ ಉಳ್ಳಾಲ,ಶಕೀಲ್ ದೇರಳಕಟ್ಟೆ, ಅಬ್ದುಲ್ ಸತ್ತಾರ್, ರಿಯಾಝ್ ಮಲಾರ್, ಝಕರಿಯಾ ಮಲಾರ್ , ಸುಂದರ ಪೂಜಾರಿ, ಕಬೀರ್ ದೇರಳಕಟ್ಟೆ, ನಝರ್ ನಡುಪದವು ಮತ್ತಿತರರು ಉಪಸ್ಥಿತರಿದ್ದರು.
ನವಾಝ್ ನರಿಂಗಾನ , ಸ್ವಾಗತಿಸಿದರು.