ಮಾದಕ ವಸ್ತು ಸೇವನೆ: ಮೂವರ ಬಂಧನ
Wednesday, October 7, 2026
ಉಳ್ಳಾಲ: ಮುನ್ನೂರು ಗ್ರಾಮದ ಜಲಾಲ್ ಭಾಗ್ ಬಳಿ ನಿಷೇದಿತ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದ ಮೂವರನ್ನು ಉಳ್ಳಾಲ ಠಾಣಾ ಪಿಎಸ್ಐ ಸಂತೋಷ್ ಕುಮಾರ್ ಡಿ ನೇತೃತ್ವದ ತಂಡ ಪತ್ತೆಮಾಡಿ ಬಂಧಿಸಿದ ಘಟನೆ ವರದಿಯಾಗಿದೆ.
ಬಂಧಿತರನ್ನು ಮೊಹಮ್ಮದ್ ಜಾಸಿಮ್ (19), ಅದ್ನಾನ್ ಮೊಹಮ್ಮದ್ (19),ಅಮೀರ್ ಮೊಹಮ್ಮದ್ (19) ಎಂದು ಗುರುತಿಸಲಾಗಿದೆ.
ಮೂಲತಃ ಕೇರಳ ನಿವಾಸಿಗಳಾದ ಇವರು ಕುತ್ತಾರ್,ಜಲಾಲ್ ಬಾಗ್ ಆಸುಪಾಸಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಬಂಧಿತರನ್ನು ದೇರಳಕಟ್ಟೆ ಕೆ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ