ಬಂಟ್ವಾಳ ಅಂಚೆಕಚೇರಿಯ ಅಧಿಕಾರಿ ಹೃದಯಾಘಾತದಿಂದ ಮೃತ್ಯು

ಬಂಟ್ವಾಳ ಅಂಚೆಕಚೇರಿಯ ಅಧಿಕಾರಿ ಹೃದಯಾಘಾತದಿಂದ ಮೃತ್ಯು


ಬಂಟ್ವಾಳ: ಇಲ್ಲಿನ ಸಬ್ ಡಿವಿಷನ್ ಅಂಚೆ ಇಲಾಖೆಯಲ್ಲಿ ಎಸ್.ಒ. ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜನಾರ್ದನ ಸುಳ್ಯ (48) ಅವರು ಹೃದಾಯಾಘಾತಕ್ಕೊಳಗಾಗಿ ನಿಧನರಾದರು.

ಮೂಲತಃ ಸುಳ್ಯ ನಿವಾಸಿಯಾಗಿರುವ ಇವರು ಮನೆಯಲ್ಲಿದ್ದಾಗ ಮಂಗಳವಾರ ಸಂಜೆ ವೇಳೆ ಅವರಿಗೆ ದಿಢೀರನೇ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಸುಳ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು, ಜನಸ್ನೇಹಿ ಅಧಿಕಾರಿಯಾಗಿ ಸಹೋದ್ಯೋಗಿಗಳು ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಜನಾರ್ದನ ಅವರು ಉತ್ತಮ ಹಾಡುಗಾರರಾಗಿಯು ತಮ್ನ ಸ್ನೇಹಿತರ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಅವರ ಪಾರ್ಥಿವ ಶರೀರವನ್ನು ಬಂಟ್ವಾಳ ಅಂಚೆ ಕಚೇರಿಯಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು, ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಂತಿಮ ನಮನ ಸಲ್ಲಿಸಿ ಗೌರವ ಅರ್ಪಿಸಿದರು.

ಮೃತರು ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಅಪಾರ ಸ್ನೇಹಿತರನ್ನು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article