ಕುಕ್ಕೆ ದೇವಳದಲ್ಲಿ ಗಜಲಕ್ಷ್ಮಿ ಪೂಜೆ
Wednesday, November 11, 2026
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಳದ ಆನೆ ಯಶಸ್ವಿನಿಗೆ ವರ್ಷಪ್ರತಿಯಂತೆ ದೀಪಾವಳಿಯಂದು ಗಜಲಕ್ಷ್ಮಿ ಪೂಜೆ ನಡೆಯಿತು.
ದೇವಳದ ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲುರಾಯ ಅವರು ಗಜಲಕ್ಷ್ಮಿಗೆ ಆರತಿ ಬೆಳಗಿ, ಹಣ್ಣು ಹಂಪಲು ತಿನ್ನಿಸಿ ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರುಗಳು ಅಧಿಕಾರಿವರ್ಧದವರು, ಸಿಬ್ಬಂದಿವರಿಂದವರು, ಸಾರ್ವಜನಿಕರು ಹಾಗೂ ಶ್ರೀ ದೇವಳಕ್ಕೆ ಬಂದ ಭಕ್ತಾದಿಗಳು ಹಾಜರಿದ್ದರು.