ಕುಕ್ಕೆ ದೇವಳದಲ್ಲಿ ಗೋಪೂಜೆ
Wednesday, November 11, 2026
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೀಪಾವಳಿ ಅಂಗವಾಗಿ ಗೋಪೂಜೆ ನೆರವೇರಿತು.
ಕ್ಷೇತ್ರ ಪುರೋಹಿತ ಕೊರ್ನಾಯ ಅವರು ಗೋವುಗಳಿಗೆ ತಿಂಡಿ ತಿನಿಸು ತಿನ್ನಿಸಿ, ಹೂಹಾರ ಹಾಕಿ, ಆರತಿ ಬೆಳಗಿ ಗೋಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗಿರತಿ ಮುರುಳ್ಯ, ಶ್ರೀ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರುಗಳು, ಅಧಿಕಾರಿ ವೃಂದದವರು, ಸಿಬ್ಬಂದಿವರಿಂದದವರು ಹಾಗೂ ಭಕ್ತಾದಿಗಳು ಹಾಜರಿದ್ದರು.

