ಕುಕ್ಕೆ ದೇವಳದಲ್ಲಿ ಹೊರಾಂಗಣ ಉತ್ಸವಗಳು ಆರಂಭ

ಕುಕ್ಕೆ ದೇವಳದಲ್ಲಿ ಹೊರಾಂಗಣ ಉತ್ಸವಗಳು ಆರಂಭ


ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೀಪಾವಳಿಯಂದು ಹೊರಾಂಗಣ ಉತ್ಸವಗಳು ಆರಂಭಗೊಂಡಿದೆ. 


ದೀಪಾವಳಿಯ ಪಾಡ್ಯ ದಿನವಾದ ಮಂಗಳವಾರದಂದು ಶ್ರೀ ದೇವರು ಒಳಾಂಗಣದಿಂದ ಪಲ್ಲಕ್ಕಿ ಮೂಲಕ ಹೊರಾಂಗಣ ಪ್ರವೇಶಿಸಿ ಬಂಡಿ ಉತ್ಸವದಲ್ಲಿ ಆರೂಢರಾದರು. ನೆರೆದ ಸಾವಿರಾರು ಭಕ್ತರು ದೀಪಾವಳಿಯ ಪುಣ್ಯ ದಿನದಂದು ಹೊರಾಂಗಣ ಉತ್ಸವದಲ್ಲಿ ಪಾಲ್ಗೊಂಡರು. 


ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ ಭಾಗೀರಥಿ ಮುರಳಿಯ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರುಗಳು, ಅಧಿಕಾರಿ, ಸಿಬ್ಬಂದಿವಿಂದದವರು ಹಾಗೂ ಭಕ್ತರು ಹಾಜರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article